×
Ad

ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಅಬ್ದುಲ್ಲ ಮಾದುಮೂಲೆಗೆ ಸನ್ಮಾನ

Update: 2023-11-09 13:12 IST

ಅಬುಧಾಬಿ, ನ.9: ಪ್ರಸಕ್ತ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ಲ ಮಾದುಮೂಲೆಯವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯುಎಫ್), ಅಬುಧಾಬಿ ಇದರ ವತಿಯಿಂದ ಸನ್ಮಾನಿಸಲಾಯಿತು.

ನಗರದ ಗ್ರಾಂಡ್ ಕಾಂಟಿನೆಂಟಲ್ ಹೊಟೇಲ್ ನ ಬಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಸಮಾರಂಭವು ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಬಿಡಬ್ಲ್ಯುಎಫ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ಲ ಮಾದುಮೂಲೆಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ಲ ಮಾದುಮೂಲೆ, ತಮ್ಮ ಸಾಧನೆಯ ಹಾದಿ ಮತ್ತು ಸಾಧಿಸಬೇಕಾದ ಗುರಿಗಳ ಬಗ್ಗೆ ವಿವರಿಸಿ, ಯುವಜನತೆಗೆ ಹಿತನುಡಿಗಳನ್ನಾಡಿದರು.

ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾತನಾಡಿ, ಅಬ್ದುಲ್ಲ ಮಾದುಮೂಲೆಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಅಥಿತಿಗಳಾಗಿ ಅಬ್ದುಲ್ ಹಮೀದ್ ಉಚ್ಚಿಲ್, ಫಕ್ರುದ್ದೀನ್ ಭಟ್, ಮುಹಮ್ಮದ್ ಹಕೀಮ್, ಜೈನ್ ಉಸ್ತಾದ್, ಕಬೀರ್  ಮತ್ತು ಸಹೀರ್ ಹುದವಿ ಉಪಸ್ಥಿತರಿದ್ದರು.

ಬಿಡಬ್ಲ್ಯುಎಫ್ ಒಡನಾಡಿಗಳಾದ ಹಮೀದ್ ಗುರುಪುರ, ಮುಜೀಬ್ ಉಚ್ಚಿಲ್, ಮಜೀದ್ ಆತೂರ್, ಸಿರಾಜ್ ಪಾರಾಲಡ್ಕ, ನಝೀರ್ ಉಬರ್, ರಶೀದ್ ವಿ.ಕೆ. ಮತ್ತು ನಿಝಾಮ್ ವಿಟ್ಲ ಶುಭ ಹಾರೈಸಿದರು.

ಅಬ್ದುಲ್ ರವೂಫ್ ಸನ್ಮಾನಿತರ ಪರಿಚಯ ನೀಡಿದರು.

ಬಿಡಬ್ಲ್ಯುಎಫ್ ಪದಾಧಿಕಾರಿಗಳಾದ ಇರ್ಫಾನ್ ಕುದ್ರೋಳಿ, ಇಮ್ರಾನ್ ಕೃಷ್ಣಾಪುರ ಮತ್ತು ಯಹ್ಯಾ ಕೊಡ್ಲಿಪೇಟೆ ಉಪಸ್ಥಿತರಿದ್ದರು.

ಇಮ್ರಾನ್ ಕುದ್ರೋಳಿ ಮತ್ತು ಮುಹಮ್ಮದ್ ಕಲ್ಲಾಪು ಕಾರ್ಯಕ್ರಮ ಸಂಘಟಿಸಿದರು. ಜಲೀಲ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು. ನವಾಜ್ ಉಚ್ಚಿಲ್ ಕಿರಾಅತ್ ಪಠಿಸಿದರು. ಹಂಝ ಕನ್ನಂಗಾರ್ ಸ್ವಾಗತಿಸಿದರು. ಅಬ್ದುಲ್ ಮಜೀದ್ ಕುತ್ತಾರ್ ವಂದಿಸಿದರು. 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News