×
Ad

ಅಬುಧಾಬಿ| ಸೆ.6ರಂದು ಕೆಸಿಎಫ್ ವತಿಯಿಂದ ಗ್ರ್ಯಾಂಡ್ ಮೀಲಾದ್

ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಳ ಮುಖ್ಯ ಪ್ರಭಾಷಣ

Update: 2025-09-05 23:43 IST

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಬುಧಾಬಿ ಝೋನ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ 1500 ನೇ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ಬೃಹತ್ ಮೀಲಾದ್ ಸಮಾವೇಶವು ಸೆ.6ರಂದು ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಭವನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಖ್ಯಾತ ವಾಗ್ಮಿ, ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಳ ಹಾಗು ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ. ಮೌಲಿದ್, ಬುರ್ದಾ ಮಜ್ಲಿಸ್ ಹಾಗೂ ನಹತೆ ಶರೀಫ್ ಕಾರ್ಯಕ್ರಮಗಳು ನಡೆಯಲಿವೆ.

ಈ ಕುರಿತು ವಿವರಿಸಲು ಅಬುಧಾಬಿ ಕೆಸಿಎಫ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಝೋನ್ ಸಮಿತಿ ಅಧ್ಯಕ್ಷ ಕಬೀರ್ ಬಾಯಂಬಾಡಿ, ಕಾರ್ಯದರ್ಶಿ ಉಮರ್ ಈಶ್ವರ ಮಂಗಿಲ, ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಮುಹಮ್ಮದ್ ಅಲಿ ಹಾಜಿ ಬ್ರೈಟ್ ಹಾಗೂ ಖಜಾಂಜಿ ಹಮೀದ್ ಪೆರುವಾಯಿ‌ ಭಾಗವಹಿಸಿದ್ದು, ಪ್ರವಾದಿ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News