ಬಹರೈನ್: ʼಎಕ್ಸ್‌ಪರ್ಟೈಸ್ʼ ಉಪಾಧ್ಯಕ್ಷ ಕೆ.ಎಸ್.ಶೇಖ್ ಕರ್ನಿರೆಗೆ ಸೌದಿ ಅರೇಬಿಯಾದ ಅತ್ಯುತ್ತಮ ಉದ್ಯಮಿ ಪ್ರಶಸ್ತಿ
Update: 2023-09-11 23:09 IST
ಬಹರೈನ್: ʼಎಕ್ಸ್‌ಪರ್ಟೈಸ್ʼ ಉಪಾಧ್ಯಕ್ಷ ಕೆ.ಎಸ್.ಶೇಖ್ ಕರ್ನಿರೆ ಅವರಿಗೆ ಸೌದಿ ಅರೇಬಿಯಾದ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಲಭಿಸಿದೆ.
ಬಹರೈನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ʼಎಕ್ಸ್‌ಪರ್ಟೈಸ್ʼ ಉಪಾಧ್ಯಕ್ಷ ಕೆ.ಎಸ್.ಶೇಖ್ ಕರ್ನಿರೆ ಅವರಿಗೆ ಸೌದಿ ಅರೇಬಿಯಾದ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೀಡಿ ಗೌರವಿಸಿದರು.
ಕೆ.ಎಸ್.ಶೇಖ್ ಕರ್ನಿರೆ ಅವರು ಮಂಗಳೂರಿನ ಕರ್ನಿರೆ ಗ್ರಾಮದಲ್ಲಿ ಹುಟ್ಟಿ ಬೆಳೆದು, ದಶಕಗಳ ಹಿಂದೆ ಬದುಕನ್ನು ಅರಸುತ್ತಾ ಸೌದಿ ಅರೇಬಿಯಾಕ್ಕೆ ಹೋಗಿ, ತನ್ನ ದಕ್ಷ, ಪ್ರಾಮಾಣಿಕ ಮತ್ತು ಅವಿರತ ಶ್ರಮದಿಂದ ತಮ್ಮ ಸಹೋದರರನ್ನೊಳಗೊಂಡು "ಎಕ್ಸ್‌ಪರ್ಟೈಸ್" ಸಂಸ್ಥೆಯನ್ನು ಸ್ಥಾಪಿಸಿದರು. ಇದೀಗ ಈ ಸಂಸ್ಥೆ ವಿಶ್ವಮಾನ್ಯತೆಯನ್ನು ಗಳಿಸಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಿದೆ.