ಮುಹಮ್ಮದ್ ಆಲಿ ಉಚ್ಚಿಲ್‌ರಿಗೆ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ಸನ್ಮಾನ
ಅಬುಧಾಬಿ : ದ.ಕ.ಜಿಲ್ಲಾ ʼರಾಜ್ಯೋತ್ಸವ ಪ್ರಶಸ್ತಿʼ ಪುರಸ್ಕೃತ ಮುಹಮ್ಮದ್ ಆಲಿ ಉಚ್ಚಿಲ್ ಅವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ನಗರದ ಹೋಟೆಲ್‌ನ ಬಾಂಕ್ವೀಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಬ್ಯಾರೀಸ್ ವೆಲ್ಫೇರ್ ಫೋರಂ ಉಪಾಧ್ಯಕ್ಷ ಹಂಝ ಖಾದರ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಜಲೀಲ್ ಬಜ್ಪೆ ಕಾರ್ಯಕ್ರಮ ನಡೆಸಿಕೊಟ್ಟರು. ನೂಹ್ ರಶೀದ್ ಕಿರಾತ್ ಪಠಿಸಿದರು ಮತ್ತು ಉಪಾಧ್ಯಕ್ಷ ಅಬ್ದುಲ್ ರವೂಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಝ ಕಣ್ಣಂಗಾರ್ ಸ್ವಾಗತಿಸಿದರು.
ಮುಹಮ್ಮದ್ ಕಲ್ಲಾಪು, ಇಮ್ರಾನ್ ಕುದ್ರೋಳಿ ಮತ್ತು ನವಾಝ್ ಉಚ್ಚಿಲ್ ಸಮಾರಂಭವನ್ನು ಸಂಘಟಿಸಿದ್ದರು. ಬಿಡಬ್ಲ್ಯೂಎಫ್‌ನ ಪದಾಧಿಕಾರಿಗಳಾದ ಮುಹಮ್ಮದ್ ಅನ್ಸಾರ್ ಬೆಳ್ಳಾರೆ, ಇರ್ಫಾನ್ ಕುದ್ರೋಳಿ, ಮುಜೀಬ್ ಉಚ್ಚಿಲ್, ನಿಝಾಮ್, ನಝೀರ್ ಉಬಾರ್ ಮತ್ತು ಇಮ್ರಾನ್ ಕೃಷ್ಣಾಪುರ ಸೇರಿದಂತೆ ಟೀಮ್ ಬಿಡಬ್ಲ್ಯೂಎಫ್‌ನ ಮಹಿಳಾ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದ್ದರು.
ಬಿಡಬ್ಲ್ಯೂಎಫ್ ಒಡನಾಡಿಗಳಾದ ಹಮೀದ್ ಗುರುಪುರ, ಮಜೀದ್ ಆತೂರ್, ಸಿರಾಜ್ ಪರ್ಲಡ್ಕ ಮತ್ತು ರಶೀದ್ ವಿ.ಕೆ ಮಾತನಾಡಿದರು.
ಮುಹಮ್ಮದ್ ಆಲಿ ಉಚ್ಚಿಲ್ ಅವರನ್ನು ಶಾಲು ಹೊದಿಸಿ, ಬಿಡಬ್ಲ್ಯೂಎಫ್ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಫಕ್ರುದ್ದೀನ್ ಭಟ್, ಮೊಹಿದ್ದೀನ್ ಕಕ್ಕಿಂಜೆ, ಅಲಿ ಕುಂಞಿ, ಲತೀಫ್ ನೀರ್ಕಜೆ, ಮುಹಮ್ಮದ್ ಇಮ್ತಿಯಾಝ್, ಮುಬಾರಕ್, ಮೊಹಮ್ಮದ್ ಹಕೀಮ್, ಜೈನೀ ಸಖಾಫಿ ಉಸ್ತಾದ್, ಕಬೀರ್ ಮತ್ತು ಸಹೀರ್ ಹುದವಿ ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ಕುತ್ತಾರ್ ಧನ್ಯವಾದ ಸಮರ್ಪಿಸಿದರು.