×
Ad

ಬಿಡಬ್ಲ್ಯೂಎಫ್ ವತಿಯಿಂದ ಮುಮ್ತಾಝ್ ಅಲಿಗೆ ಸಂತಾಪ ಸೂಚಕ ಸಭೆ

Update: 2024-10-13 16:36 IST

ಅಬುಧಾಬಿ: ಅಗಲಿದ ಅತೀ ಪ್ರಿಯ ಕಿರಿಯ ಗೆಳೆಯ, ಸಮುದಾಯದ ಕಣ್ಮಣಿ, ಅತೀವ ಜೀವನ ಪ್ರೀತಿಯ, ಯಾವಾಗ ಸಂಪರ್ಕಿಸಿದರೂ ತಕ್ಷಣ ಸ್ವಂದಿಸಿ ಸಹಕರಿಸುತ್ತಿದ್ದ, ಬಿ ಡಬ್ಲ್ಯೂ ಎಫ್ ನ ಎಲ್ಲಾ ಚಟುವಟಿಕೆಗಳಲ್ಲಿ ಅತೀವವಾಗಿ ಸಹಕರಿಸಿದ್ದ ಮುಮ್ತಾಝ್ ಅಲಿಯವರ ಮರಣ ಅತೀವ ಆಘಾತವನ್ನು ತಂದಿದೆ. ಅಲ್ಲಾಹು ಸ್ವರ್ಗದಲ್ಲಿ ಉನ್ನತ ದರ್ಜೆಯನ್ನು ನೀಡಿ ಕರುಣಿಸಲಿ ಎಂದು ಬ್ಯಾರೀಸ್ ವೆಲ್ಫೇರ್ ಫಾರಂ, ಅಬುಧಾಬಿ ಇದರ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಹೇಳಿದರು.


ಇಎಮ್ಐ ಸ್ಟೇಟ್ ಟವರ್ ನಲ್ಲಿ ಬಿ ಡಬ್ಲ್ಯೂ ಎಫ್ ಸಂಘಟಿಸಿದ ಸಂತಾಪ ಸೂಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮುಮ್ತಾಝ್ ಅಲಿ ಅವರ ವ್ಯಕ್ತಿತ್ವದ ಬಗ್ಗೆ ಅಬ್ದುಲ್ ರವೂಫ್, ಮೊಹಮ್ಮದ್ ಕಲ್ಲಾಪು, ಜಲೀಲ್ ಗುರುಪುರ, ಇಮ್ರಾನ್ ಕುದ್ರೋಳಿ, ನವಾಝ್ ಉಚ್ಚಿಲ್,‌ ಮಜೀದ್ ಆತೂರ್, ಹಮೀದ್ ಗುರುಪುರ್, ಇರ್ಫಾನ್ ಕುದ್ರೋಳಿ, ಮಜೀದ್ ಆಡಿಟರ್ ಮತ್ತು ಇಮ್ರಾನ್ ಕೃಷ್ಣಾಪುರ ಮಾತನಾಡಿದರು.


ಮುಜೀಬ್ ಉಚ್ಚಿಲ್ ಸ್ವಾಗತಿಸಿ, ವಂದಿಸಿದರು.

ಮುಮ್ತಾಝ್ ಅಲಿ,‌ ಎ.ಕೆ. ಅಹ್ಮದ್ ಮತ್ತು ಯಾಸೀನ್ ಬೈಜಿ ಅವರಿಗೆ ಜನಾಝಾ ನಮಾಝ್ ನೆರವೇರಿಸಲಾಯಿತು.




















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News