×
Ad

ನಿವಾಸಿಗಳು ಹಾಗೂ ಸಂದರ್ಶಕರಿಗೆ ವಿಶ‍್ವಾಸಾರ್ಹ ಮಾಹಿತಿ ಒದಗಿಸಲು ಡಿಜಿಟಲ್ ವೇದಿಕೆ ಪ್ರಾರಂಭಿಸಿದ ದುಬೈ

Update: 2023-10-13 20:39 IST

Photo: PTI 

ದುಬೈ: ನಗರದ ಹಲವಾರು ವಲಯಗಳಲ್ಲಿನ ಸೇವೆಗಳು ಹಾಗೂ ಮಾಹಿತಿ ಕುರಿತು ಸುಲಭವಾಗಿ ಮತ್ತು ಅನಿರ್ಬಂಧಿತವಾಗಿ ಪ್ರವೇಶ ಪಡೆಯಲು ತನ್ನ ದೇಶದ ನಾಗರಿಕರು, ನಿವಾಸಿಗಳು ಹಾಗೂ ಸಂದರ್ಶಕರಿಗೆ ಕೃತಕ ಬುದ್ಧಿಮತ್ತೆಯ ಡಿಜಿಟಲ್ ವೇದಿಕೆಯನ್ನು ದುಬೈ ಪ್ರಾರಂಭಿಸಿದೆ ಎಂದು khaleejtimes.com ವರದಿ ಮಾಡಿದೆ.

ದುಬೈನ ಉತ್ಪಾದಕ ಕೃತಕ ಬುದ್ಧಿಮತ್ತೆ ಸದನದಲ್ಲಿನ ದುಬೈ ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈ ಸೇವೆಯನ್ನು ಪ್ರಾರಂಭಿಸಿದ್ದು, ಎಲ್ಲ ವಲಯಗಳಲ್ಲಿನ ಬಳಕೆದಾರರಿಗೆ ಈ ವೇದಿಕೆಯು ವಿಶ‍್ವಾಸಾರ್ಹ ಮೂಲಗಳ ಮೂಲಕ ನಿಖರ ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ.

‘ದುಬೈ ಎಐ’ ಎಂದು ಕರೆಯಲಾಗುವ ಈ ವೇದಿಕೆಯು ನಾಗರಿಕರು, ನಿವಾಸಿಗಳು, ಸಂದರ್ಶಕರು, ಉದ್ಯಮ ಮಾಲಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಮುಕ್ತವಾಗಿದ್ದು, ಆರೋಗ್ಯ, ಶಾಲೆಗಳು, ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಸೇರಿದಂತೆ ಶಿಕ್ಷಣ, ಪ್ರವಾಸಿ ತಾಣಗಳು, ರೆಸ್ಟೋರೆಂಟ್ ಗಳು ಹಾಗೂ ಸಾರಿಗೆಯೊಂದಿಗೆ ಕ್ರೀಡೆಗಳು, ಹವಾಮಾನ, ಪರಿಸರ, ಪ್ರವಾಸೋದ್ಯಮ, ವಿಮಾನ ಯಾನ, ವ್ಯಾಪಾರ, ರಿಯಲ್ ಎಸ್ಟೇಟ್ ಹಾಗೂ ನಗರದ ಕುರಿತು ಬಳಕೆದಾರರಿಗೆ ಬೇಕಿರುವ ಇನ್ನೂ ಹಲವಾರು ವಿಷಯಗಳ ಕುರಿತು ವಿಚಾರಿಸಲು ಅವಕಾಶವಿದೆ.

ಅಧಿಕೃತ ಮೂಲಗಳ ಮೂಲಕ ನಗರದ ಎಲ್ಲ ವಲಯಗಳ ಕುರಿತು ಈ ದತ್ತಾಂಶವನ್ನು ನಿರಂತವಾಗಿ ನವೀಕರಿಸಲಾಗುತ್ತದೆ. ಈ ವೇದಿಕೆಯು ಬಳಕೆದಾರರ ಪಾಲಿಗೆ ವೈಯಕ್ತಿಕ ಡಿಜಿಟಲ್ ನೆರವಿನಂತೆ ಕಾರ್ಯನಿರ್ವಹಿಸಲಿದ್ದು, ಆ ಕ್ಷಣವೇ ಬಳಕೆದಾರರ ವಿಚಾರಣೆಗೆ ಉತ್ತರಿಸಲು ಕೃತಕ ಬುದ್ಧಿಮತ್ತೆ ವಿಧಾನದ ಮೂಲಕ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬಳಕೆದಾರರಿರಗೆ ತಮ್ಮ ಮಾತುಕತೆಯ ಸಂದರ್ಭದಲ್ಲಿ ನಿರ್ದಿಷ್ಟ ಉತ್ತರ ದೊರೆತ ಅನುಭವವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News