×
Ad

ದುಬೈನ ಅಲ್ ಬರ್ಶಾದಲ್ಲಿನ ರೆಸ್ಟೋರೆಂಟ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ ; ಭಾರೀ ಅಗ್ನಿಅವಘಡ

Update: 2025-05-14 13:02 IST

PC | X @DCDDubai

ದುಬೈ : ಮಂಗಳವಾರ ರಾತ್ರಿ ದುಬೈನ ಮಾಲ್ ಆಫ್ ದಿ ಎಮಿರೇಟ್ಸ್ ಬಳಿಯ ರೆಸ್ಟೋರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಈ ಕುರಿತು, ದುಬೈ ಸಿವಿಲ್ ಡಿಫೆನ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಅಲ್ ಬರ್ಶಾ 1 ರಲ್ಲಿರುವ ಪರ್ಲ್ ವ್ಯೂ ರೆಸ್ಟೋರೆಂಟ್ ಮತ್ತು ಕೆಫೆಟೇರಿಯಾದಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದೆ.

ಘಟನೆಯಲ್ಲಿ ಜನರು ಗಾಯಗೊಂಡಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ರೆಸ್ಟೋರೆಂಟ್ ವಸತಿ ಕಟ್ಟಡದ ಕೆಳಗಿನ ಮಹಡಿಯಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬೆಂಕಿ ಕಟ್ಟಡದ ಇತರ ಭಾಗಗಳಿಗೆ ಹರಡುತ್ತಿರುವುದನ್ನು ತೋರಿಸಿವೆ. ಬೆಂಕಿಯು ಕೆನ್ನಾಲಿಗೆ ಹರಡುವ ಮೊದಲು ನಿವಾಸಿಗಳಿಗೆ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ತಿಳಿದು ಬಂದಿದೆ.

ಅನಿಲ ಸೋರಿಕೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News