×
Ad

ಮರ್ಕಝ್ ಕೈಕಂಬ ಮದೀನಾ ಘಟಕ ವತಿಯಿಂದ ಯಾ ಫತ್ತಾಹ್ ಮಜ್ಲಿಸ್, ನೂತನ ಸಮಿತಿ ರಚನೆ

Update: 2023-10-16 23:11 IST

ಜಿದ್ದಾ: ಮರ್ಕಝ್ ಕೈಕಂಬ ಮದೀನಾ ಘಟಕದ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಸಮಿತಿ ರಚನೆ ಜಿದ್ದಾದಲ್ಲಿ ರವಿವಾರ ನಡೆಯಿತು.

ಉಮರ್ ಫಾರೂಕ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಸಾರಥಿ ಬದ್ರುದ್ದೀನ್ ಅಝ್ಹರಿ ಅವರು ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. ಸಯ್ಯದ್ ಅಬ್ದುಲ್ ರಹ್ಮಾನ್ ಬುಖಾರಿ ತಂಙಳ್ ಉಚ್ಚಿಲ ಅವರು ಯಾ ಫತ್ತಾಹ್ ಮಜ್ಲಿಸ್ ನೇತೃತ್ವ ವಹಿಸಿದ್ದರು.

ಬಳಿಕ ಮರ್ಕಝ್ ಕೈಕಂಬ ಜಿದ್ದಾ ಘಟಕದ ನೂತನ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.

ಅಧ್ಯಕ್ಷರು : ಸಯ್ಯದ್ ಮುಹಮ್ಮದ್ ನಾಫಿ ತಂಙಳ್

ಕಾರ್ಯದರ್ಶಿ : ಮುಹಮ್ಮದ್ ಇರ್ಫಾನ್ ಕೈಕಂಬ

ಉಪಾಧ್ಯಕ್ಷರು : ಮುಹಮ್ಮದ್ ರಫೀಕ್ ಹಾಜಿ

ಉಪಾಧ್ಯಕ್ಷರು : ಉಮರ್ ಫಾರೂಕ್ ಅರಳ

ಜೊತೆ ಕಾರ್ಯದರ್ಶಿ : ಇಮ್ರಾನ್ ಅಡ್ಡೂರು

ಕೋಶಾಧಿಕಾರಿ : ಅಯ್ಯೂಬ್ ಬಾಂಬಿಲ

13 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

ಸಯ್ಯದ್ ನಾಫಿಅ್ ತಂಙಳ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬದ್ರುದ್ದೀನ್ ಅಝ್ಹರಿ ಸ್ವಾಗತಿಸಿದರು. ಇಂಜನಿಯರ್ ಮುಹಮ್ಮದ್ ಖಾನ್ ಕಲ್ಲರ್ಬೆ ವಂದಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News