×
Ad

ಮೆಟಲ್ಕೊ ಗ್ರೂಪ್ ಆಫ್ ಕಂಪನಿಗಳ ಮಾಲಕ ಹಾಜಿ ಅಬ್ದುಲ್ ರಝಾಕ್ ಕೋಟೆ ಹೆಜಮಾಡಿ ಅವರಿಗೆ ಬಹರೈನ್ ಅತ್ಯುತ್ತಮ ಉದ್ಯಮಿ ಪ್ರಶಸ್ತಿ

Update: 2023-09-09 18:22 IST

ಬಹರೈನ್: ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉದಾರವಾಗಿ ಸೇವೆಗೈಯುತ್ತಾ ತನ್ನನ್ನು ತೊಡಗಿಸಿಕೊಂಡಿರುವ ಮೆಟಲ್ಕೊ ಗ್ರೂಪ್ ಆಫ್ ಕಂಪನಿಗಳ ಮಾಲಕ ಹಾಜಿ ಅಬ್ದುಲ್ ರಝಾಕ್ ಕೋಟೆ ಹೆಜಮಾಡಿ ಅವರು ಬಹರೈನ್ ಅತ್ಯುತ್ತಮ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಜಿ ಅಬ್ದುಲ್ ರಝಾಕ್ ಅವರಿಗೆ ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸತತ ಮೂವತ್ತು ವರ್ಷಗಳಿಂದ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉದಾರವಾಗಿ ಸೇವೆಗೈಯುತ್ತಾ ತನ್ನನ್ನು ತೊಡಗಿಸಿ ಕೊಂಡಿರುವ ಮೆಟಲ್ಕೊ ಗ್ರೂಪ್ ಆಫ್ ಕಂಪನಿಗಳ ಮಾಲಕ ಹಾಜಿ ಅಬ್ದುಲ್ ರಝಾಕ್ ಅವರು ಬಹರೈನ್ ಅತ್ಯುತ್ತಮ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿ ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News