×
Ad

ʼಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿʼ ವತಿಯಿಂದ ಇಫ್ತಾರ್ ಕೂಟ

Update: 2024-03-20 10:36 IST

ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF) ವತಿಯಿಂದ ಬೃಹತ್‌ ಇಫ್ತಾರ್ ಕೂಟವು ಮಾ.15 ಶುಕ್ರವಾರ ದಂದು ಅಬುಧಾಬಿಯ ಐಎಸ್‌ ಸಿ ಸಭಾಂಗಣದಲ್ಲಿ ನಡೆಯಿತು. ನೂಹ್ ರಶೀದ್ ರವರ ಕಿರಾಅತ್ ಹಾಗೂ ಸಿರಾಜುದ್ದೀನ್ ಪರ್ಲಡ್ಕ ಅವರ ಅನುವಾದದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ‌ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಮೌಲ್ಯಯುತ ಧಾರ್ಮಿಕ ಸಂದೇಶವನ್ನು ನೀಡಿದರು . ಪ್ರವಚನಕಾರರಾಗಿ ಆಗಮಿಸಿದ್ದ ‌ ಝೈನುಲ್‌ ಆಬಿದೀನ್‌ ತಂಙಳ್, ಕಿನ್ಯ ಅವರು  ಸವಿಸ್ತಾರವಾಗಿ ರಮದಾನ್ ನ ಮಹತ್ವ ವನ್ನು ವಿವರಿಸಿದರು.

ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ  ಮುಹಮ್ಮದ್ ಅಲಿ ಉಚ್ಚಿಲ ಅವರು, ಇಫ್ತಾರ್ ಕೂಟಕ್ಕೆ ಆಗಮಿಸಿದವರನ್ನು ಸ್ವಾಗತಿಸಿ,  ಪ್ರಾಸ್ತಾವಿಕ ಭಾಷಣದಲ್ಲಿ  ಸಂಘಟನೆಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿದರು. ಪ್ರದಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ದಿಕ್ಸೂಚಿ ಭಾಷಣ ಮಾಡಿದರು . ಉಪಾಧ್ಯಕ್ಷ  ಅಬ್ದುಲ್ ರವೂಫ್ ಹಾಜಿ ಕೈಕಂಬ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಇನ್ನೋರ್ವ ಉಪಾಧ್ಯಕ್ಷ ಹಂಝ ಕಣ್ಣಂಗಾರ್ ಧನ್ಯವಾದ ಸಲ್ಲಿಸಿದರು.

ಸುಮಾರು 700 ಕ್ಕೂ ಅಧಿಕ ಮಂದಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದರು. ಇಮ್ರಾನ್ ಕುದ್ರೋಳಿ , ಮುಹಮ್ಮದ್ ಕಲ್ಲಾಪು, ನವಾಝ್ ಉಚ್ಚಿಲ ,ಮಜೀದ್ ಆತೂರ್ ,ಹಮೀದ್ ಗುರುಪುರ ,ಅಬ್ದುಲ್ ಮಜೀದ್ ಆಡಿಟರ್, ಹನೀಫ್ ಉಳ್ಳಾಲ, ಜಲೀಲ್ ಬಜ್ಪೆ, ಬಶೀರ್ ಬಜ್ಪೆ ಇರ್ಫಾನ್ ಕುದ್ರೋಳಿ, ಮುಜೀಬ್ ಉಚ್ಚಿಲ, ರಶೀದ್ ವಿ ಕೆ ,ನಝೀರ್ ಉಬರ್, ಬಶೀರ್ ಉಚ್ಚಿಲ, ಯಾಹ್ಯಾ ಕೊಡ್ಲಿಪೇಟೆ ,ಮೊಯಿನುದ್ದೀನ್ ಹಂಡೇಲ್, ನಿಝಾಮ್ ವಿಟ್ಲ, ಇಮ್ರಾನ್ ಕೃಷ್ಣಾಪುರ ಮತ್ತು ರಶೀದ್ ಬಿಜೈ ರವರು ಈ ಇಫ್ತಾರ್ ಕೂಟವನ್ನು ಸಂಘಟಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News