ಕಾಟಿಪಳ್ಳ ಕೆಎಂವೈಎ ದಮಾಮ್ ವತಿಯಿಂದ ಸನ್ಮಾನ
Update: 2025-11-17 23:46 IST
ದಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಶನ್ ದಮಾಮ್ ವತಿಯಿಂದ ಜುಬೈಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025 ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಮುಝೈನ್, ಪ್ರೊ.ಯು.ಟಿ. ಇಫ್ತಿಕಾರ್ ಫರೀದ್, ಇನಾಯತ್ ಅಲಿ ಅವರನ್ನು ಸನ್ಮಾನಿಸಲಾಯಿತು.
ಕೆಎಂವೈಎ ದಮಾಮ್ ಅಧ್ಯಕ್ಷ ಮುಸ್ತಫ ಆರಗ ಅಧ್ಯಕ್ಷತೆ ವಹಿಸಿದರು. ಮಾಜಿ ಅಧ್ಯಕ್ಷ ಪಿ.ಎಂ. ಮನ್ಸೂರ್, ಕೆಎಂವೈಎ ರಿಯಾದ್ ಅಧ್ಯಕ್ಷ ಪಿ.ಎಸ್.ಅಬ್ದುಲ್ ಅಝೀಝ್, ನಝೀರ್ ಅಲ್ ಬಾತಿನ್, ಶಫೀಖ್ ಟೇಬಲ್ ಫೋರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಕೆಎಂವೈಎ ನಡೆದು ಬಂದ 37 ವರ್ಷಗಳ ಹಾದಿಯ ಬಗ್ಗೆ ವಿವರಿಸಿದರು. ಸೈಫುಲ್ಲ ಮುಹ್ಯಿದ್ದೀನ್ ಕಾರ್ಯಕ್ರಮ ನಿರೂಪಿಸಿದರು.