ಅಬುಧಾಬಿ| ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ರಿಗೆ ಬಿಡಬ್ಲ್ಯೂಎಫ್ ವತಿಯಿಂದ ಸನ್ಮಾನ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ (ಬಿ ಡಬ್ಲ್ಯೂಎಫ್) ಅಬುಧಾಬಿ ವತಿಯಿಂದ ಕರ್ನಾಟಕ ಬ್ಯಾರಿ ಅಕಾಡಮಿ ಇದರ ಅಧ್ಯಕ್ಷರೂ ಮತ್ತು ಬಿಡಬ್ಲ್ಯೂ ಫ್ ನ ಹಿತೈಷಿಯೂ ಆದ ಯುಎಇ ಪ್ರವಾಸದಲ್ಲಿರುವ ಉಮರ್ ಯು ಎಚ್ ಅವರೊಂದಿಗೆ ಮೀಟ್ & ಗ್ರೀಟ್ ಪಾರ್ಟಿ ಏರ್ಪಡಿಸಲಾಗಿತ್ತು.
ಬಿ ಡಬ್ಲ್ಯೂಎಫ್ ನ 20ನೇ ವಾರ್ಷಿಕ ಮತ್ತು ವಿಶ್ವ ಬ್ಯಾರಿ ಸಮ್ಮೇಳನವನ್ನು ಏರ್ಪಡಿಸುವುದರ ಕುರಿತು ಈ ಸಂದರ್ಭ ಚರ್ಚಿಸಲಾಯಿತು.
ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷರಾದ ಮಹಮ್ಮದ್ ಅಲಿ ಉಚ್ಚಿಲ್, ಬಿ ಡಬ್ಲ್ಯೂಎಫ್ ನ ಇತರ ಸಹ ಪ್ರವರ್ತಕ ರೊಂದಿಗೆ ಕೂಡಿ ಸ್ಮರಣಿಕೆ ನೀಡಿ, ಸನ್ಮಾನಿಸಿ ತುಂಬು ಹೃದಯದ ಹಾರೈಕೆ ಸಲ್ಲಿಸಿದರು. ಉಮರ್ ಯು ಎಚ್ ಅವರು ಸನ್ಮಾನಕ್ಕೆ ಅಭಾರ ಸಲ್ಲಿಸಿದರು.
ಹಮೀದ್ ಗುರುಪುರ್, ಮಜೀದ್ ಆಡಿಟರ್,ಇಮ್ರಾನ್ ಅಹ್ಮದ್, ಮಜೀದ್ ಆತೂರ್, ಮೊಹಮ್ಮದ್ ಕಲ್ಲಾಪು, ನವಾಝ್ ಉಚ್ಚಿಲ್, ಜಲೀಲ್ ಗುರುಪುರ್, ರಶೀದ್ ವಿಕೆ, ನಝೀರ್ ಉಬರ್, ಮುಜೀಬ್ ಉಚ್ಚಿಲ್, ಇಮ್ರಾನ್ ಕೃಷ್ಣಾಪುರ ಮತ್ತು ಬಶೀರ್ ಉಚ್ಚಿಲ್ ಉಪಸ್ಥಿತರಿದ್ದರು.
ನವಾಝ್ ಸ್ವಾಗತಿಸಿ, ನಝೀರ್ ಉಬರ್ ವಂದನಾರ್ಪಣೆಗೈದರು.