×
Ad

ಸೌದಿ, ಯುಎಇ ನಲ್ಲಿ ಸೋಮವಾರದಿಂದ ರಮಝಾನ್ ಉಪವಾಸ ಪ್ರಾರಂಭ

Update: 2024-03-10 20:56 IST

Photo: X/@insharifain

ಮೆಕ್ಕಾ : ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿದ್ದು, ನಾಳೆ ಮಾರ್ಚ್ 11, 2024 ಸೋಮವಾರದಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ಪ್ರಕಟನೆ ತಿಳಿಸಿದೆ.

ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಇಶಾ ನಮಾಝಿನ ನಂತರ ಸೌದಿ ಅರೇಬಿಯಾದ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆಗಳು ಪ್ರಾರಂಭವಾಗಲಿದೆ.

ಯುಎಇಯಲ್ಲೂ ಕೂಡ ನಾಳೆಯಿಂದ( ಮಾ.11) ರಮಝಾನ್ ಉಪವಾಸ ಆರಂಭವಾಗಲಿದೆ.

ಒಮಾನ್‌ ನಲ್ಲಿ ಮಂಗಳವಾರದಿಂದ( ಮಾ.12) ರಮಝಾನ್ ಉಪವಾಸ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News