×
Ad

ಮದೀನಾ ಮುನವ್ವರ ತಲುಪಿದ ಕರ್ನಾಟಕದ ಹಜ್ ಯಾತ್ರಾರ್ಥಿಗಳು: ಬರಮಾಡಿಕೊಂಡ ಕೆಸಿಎಫ್ ಹಜ್ ಸ್ವಯಂಸೇವಕರ ತಂಡ

Update: 2025-04-30 12:55 IST

ಮದೀನಾ: ಪವಿತ್ರ ಹಜ್ ನಿರ್ವಹಿಸಲು ಕರ್ನಾಟಕದಿಂದ ಆಗಮಿಸಿರುವ ಹಜ್ಜಾಜ್ ಗಳ ಮೊದಲ ವಿಮಾನವು ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣ ತಲುಪಿದೆ.

ಬೆಳಗ್ಗಿನ ಜಾವ ತಲುಪಿದ ವಿಮಾನದಲ್ಲಿ 378 ಯಾತ್ರಿಕರು ಆಗಮಿಸಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ನ ಹಜ್ ವಾಲೆಂಟಿಯರ್ ಕೋರ್(ಎಚ್.ವಿ.ಸಿ.) ಸದಸ್ಯರು ಹಜ್ ಯಾತ್ರಿಕರನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು.

 

ಕೆಸಿಎಫ್ ಎಚ್.ವಿ.ಸಿ ಸದಸ್ಯರು ಯಾತ್ರಿಕರು ತಂಗುವ ಹೋಟೆಲ್ ಗೆ ತೆರಳಿ ನೀರು ಹಾಗೂ ಕೇಕ್ ನೀಡಿ ಸತ್ಕರಿಸಿದರು. ಅಶಕ್ತ ಯಾತ್ರಿಕರನ್ನು ವೀಲ್ ಚೇರ್ ಮೂಲಕ ಹೋಟೆಲ್ ಗೆ ತಲುಪಿಸಿದರು. ಅಗತ್ಯವಿರುವ ಯಾತ್ರಿಕರಿಗೆ ಸಿಮ್ ಕಾರ್ಡ್ ಪಡೆಯಲು ಸಹಕರಿಸಿದರು.

 

ರಾಜ್ಯದಿಂದ ಒಟ್ಟು 956 ಹಜ್ ಯಾತ್ರಿಕರು ಇಂದು ಮದೀನಾ ಮುನವ್ವರ ತಲುಪಲಿದ್ದಾರೆ.

ಕರ್ನಾಟಕದಿಂದ ಆಗಮಿಸುತ್ತಿರುವ ಯಾತ್ರಾರ್ಥಿಗಳ ಎಲ್ಲಾ ಅಗತ್ಯಗಳಿಗೆ ಸ್ಪಂದಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೆಂಟಿಯರ್ ಕೋರ್ ಸದಸ್ಯರು ಸರ್ವಸನ್ನದ್ಧರಾಗಿದ್ದಾರೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News