×
Ad

ಇಸ್ರೇಲ್ ದಾಳಿಗೆ ಖತರ್, ಜೋರ್ಡನ್,ಯುಎಇ, ಸೌದಿ ಅರೆಬಿಯಾ ಖಂಡನೆ

Update: 2024-10-26 21:58 IST

PC : X

ದೋಹ : ಇರಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಖತರ್, ಜೋರ್ಡಾನ್, ಯುಎಇ ಮತ್ತು ಸೌದಿ ಅರೆಬಿಯಾ ಖಂಡಿಸಿದ್ದು ಮುಂದುವರಿದ ಉಲ್ಬಣ ಮತ್ತು ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ಖತರ್ ದೇಶವು ತನ್ನ ಬಲವಾದ ಖಂಡನೆ ವ್ಯಕ್ತಪಡಿಸುತ್ತದೆ. ಈ ಕಾರ್ಯವನ್ನು ಇರಾನ್‍ ನ ಸಾರ್ವಭೌಮತ್ವ ಮತ್ತು ಅಂತರಾಷ್ಟ್ರೀಯ ಕಾನೂನಿನ ತತ್ವಗಳ ಸ್ಪಷ್ಟ ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ' ಎಂದು ಖತರ್‍ ನ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News