×
Ad

ಲೈಂಗಿಕ ದೌರ್ಜನ್ಯ ಆರೋಪ | ಪೊಲೀಸರಿಂದ ಸೂರಜ್ ರೇವಣ್ಣ ವಿಚಾರಣೆ

Update: 2024-06-22 21:54 IST

ಸೂರಜ್ ರೇವಣ್ಣ

ಹಾಸನ: ಯುವಕನ‌ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ನಗರದ ಸಿಇಎನ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸೂರಜ್ ಗೆ ಬಂಧನ ಭೀತಿ ಎದುರಾಗಿದೆ.

ಹೊಳೆನರಸೀಪುರ ನಗರ ಠಾಣೆ ಪೊಲೀಸರೊಂದಿಗೆ ಸೂರಜ್ ರೇವಣ್ಣ ಗನ್ನಿಕಡದ ತೋಟದ ಮನೆಯಿಂದ ಹಾಸನದ ಸಿಇಎನ್ ಠಾಣೆಗೆ ಅಗಮಿಸಿದ್ದರು. ಹಣಕ್ಕಾಗಿ ಸೂರಜ್‌ ರೇವಣ್ಣ ಅವರಿಗೆ ಸಂತ್ರಸ್ತ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಹೊಳೆನರಸೀಪುರ ‌ನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ(ಜೂ.22) ದಾಖಲಾಗಿರುವ ಎಫ್‌ಐಆರ್ ಸಂಬಂಧ ಅಗತ್ಯ ದಾಖಲೆ ನೀಡಲು ಆಗಮಿಸಿದ್ದರು.

ಅಲ್ಲದೆ, ಸೂರಜ್ ವಿರುದ್ಧವೂ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಸೂರಜ್‌ ರೇವಣ್ಣ ಬಂಧನ ಸಾಧ್ಯತೆಯಿದ್ದು, ವಿಚಾರಣೆ ಪೂರ್ಣಗೊಂಡ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News