ಅರಸೀಕೆರೆ | ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ
Update: 2025-11-02 13:35 IST
ಹಾಸನ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಗಿರೀಶ್ (43) ಎಂಬ ವ್ಯಕ್ತಿಯನ್ನು ರಮೇಶ್( 28) ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಗಿರೀಶ್ ರಾಂಪುರ ಗ್ರಾಮದಲ್ಲೇ ಕೆ.ಎಂ.ಎಫ್ ಹಾಲಿನ ಡೇರಿ ನಡೆಸುತ್ತಿದ್ದರು. ಆರೋಪಿಯು ಮದ್ಯಪಾನಮತ್ತಿನಲ್ಲಿ ಬಂದು ಗ್ರಾಮಸ್ಥರ ಜೊತೆ ಜಗಳ ಆರಂಭಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ “ಯಾಕೆ ಮದ್ಯದ ನಶೆಯಲ್ಲಿ ಬಂದು ಜಗಳ ಮಾಡುತ್ತಿದ್ದೀಯಾ?” ಎಂದು ಗಿರೀಶ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಅರಸೀಕೆರೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.