×
Ad

ಚನ್ನರಾಯಪಟ್ಟಣ | ಹೆದ್ದಾರಿ ಪಕ್ಕದಲ್ಲೇ ಇದ್ದ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು!

Update: 2025-02-16 15:22 IST

ಚನ್ನರಾಯಪಟ್ಟಣ : ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದ್ದ ಇಂಡಿಯನ್ ಬ್ಯಾಂಕ್‌ನ ಎಟಿಎಂ ಯಂತ್ರವನ್ನೇ ಕಳ್ಳರು ಹೊತ್ತೊಯ್ದದಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಈ ಎಟಿಎಂ ಕೇಂದ್ರವು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇದ್ದರೂ, ಕಳ್ಳರು ಎಟಿಎಂ ಅನ್ನು ಸ್ಥಳದಿಂದ ಎಳೆದು ಕೊಂಡೊಯ್ದಿದ್ದಾರೆ. ಎಟಿಎಂನಲ್ಲಿದ್ದ ಲಕ್ಷಾಂತರ ರೂ. ನಗದು ಸಹಿತ ಯಂತ್ರ ಕಳುವಾದ ವಿಷಯಗೆ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

15 ದಿನಗಳೊಳಗೆ ಎರಡನೇ ಎಟಿಎಂ ಕಳ್ಳತನ!

ಹಾಸನದಲ್ಲಿ ಇದೇ ಮಾದರಿಯ ಕಳ್ಳತನ ಈಗಾಗಲೇ ಜ.29ರಂದು ನಡೆದಿದೆ. ಹನುಮಂತಪುರದಲ್ಲಿ ಎಟಿಎಂ ಕಳವಾದರೂ, ಇದುವರೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೀಗ 15 ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News