×
Ad

ಬೇಲೂರು | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 5 ಎಕರೆ ಕಾಫಿ ತೋಟ ಭಸ್ಮ

Update: 2024-04-16 22:29 IST

ಬೇಲೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 5 ಎಕರೆ ಕಾಫಿ ತೋಟ ಭಸ್ಮವಾಗಿರುವ ಘಟನೆ ಬೇಲೂರು ತಾಲೂಕಿನ ಕಸಬಾ ಹೋಬಳಿಯ ಹಿರಿಕೋಲೆ ಗ್ರಾಮದಲ್ಲಿ ನಡೆದಿದೆ.

ಚಾಮದೇವನಹಳ್ಳಿಯ ವರಲಕ್ಷ್ಮೀ ನಾಗರಾಜ್ ಎಂಬುವವರಿಗೆ ಸೇರಿದ 5 ಎಕರೆ ಕಾಫಿ ತೋಟದಲ್ಲಿ ನಿನ್ನೆ ಮದ್ಯಾಹ್ನ  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿ, ಜಮೀನಿನಲ್ಲಿ ಬೆಳೆದಿದ್ದ ಕಾಫಿ, ಮೆಣಸು ,ಅಡಿಕೆ ತೆಂಗು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ಹಾಳಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News