×
Ad

ಜೀವಕ್ಕೆ ಉಸಿರು, ದೇಶಕ್ಕೆ ಸರ್ವಧರ್ಮ ಎರಡೂ ಮುಖ್ಯ: ಯು.ಟಿ ಖಾದರ್

Update: 2023-11-07 15:47 IST

ಅರಸೀಕೆರೆ: ಮನುಷ್ಯ ಬದುಕಲು ಉಸಿರು ಎಷ್ಟು ಮುಖ್ಯವೋ ಸೌಹಾರ್ದತೆ ಅಷ್ಟೇ ಮುಖ್ಯ, ದೇಶದಲ್ಲಿ ಶಾಂತಿ ಇಲ್ಲದೆ ಯಾರು ಸಹ ನೆಮ್ಮದಿಯಿಂದ ಬದುಕು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರಾದ ಯುಟಿ ಖಾದರ್ ಹೇಳಿದರು.

ನಗರದ ಹುಳಿಯಾರ್ ರಸ್ತೆ ಎಸ್.ಎಂ.ಜೆ. ಸಮುದಾಯ ಭವನದಲ್ಲಿ ಸುಲ್ತಾನುಲ್ ಹಿಂದ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ವಧರ್ಮ ಸಮನ್ವಯ ಹಾಗೂ ಸನ್ಮಾನ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಶಾಂತಿಗೆ ಭಂಗ ಬರುವ ಸಂದರ್ಭದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಹೇಳಿದರು.

ಈ ಸಮಾಜವನ್ನು ಹಿರಿಯರು ಬಹಳ ಶ್ರಮದಿಂದ ಕಟ್ಟಿದ್ದಾರೆ, ಬಡತನದಲ್ಲೂ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆ. ಉತ್ತಮ ಸಮಾಜದ ದಾರಿಯನ್ನು ನಮಗೆ ತೋರಿಸಿದ್ದಾರೆ ಅವರ ಸಲಹೆಯಂತೆ ಬದುಕಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ಮೌಲಾನಾ ನೈಯುಮುದ್ದೀನ್ ಖಾದ್ರಿ, ಬೂದಿಹಾಳ ವಿರಕ್ತ ಮಠದ ಶ್ರೀ ಶಶಿಶೇಖರ್ ಸಿದ್ದಬಸವ ಮಹಾಸ್ವಾಮಿಗಳು, ಸಿ.ಎಸ್.ಐ. ಕ್ರೈಸ್ತ ದೇವಾಲಯದ ಫಾದರ್ ಜಾನ್ ಬಾಬು, ಸ್ಥಳೀಯ ಶಾಸಕ ಕೆ.ಎಂ ಶಿವಲಿಂಗೇಗೌಡ, ಕರ್ನಾಟಕ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎನ್.ಕೆ.ಎಂ. ಶಾಪಿ ಸಅದಿ, ಸುನ್ನಿ ಮುಸ್ಲಿಂ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸೈಯದ್ ರಫೀಕ್, ಸುಲ್ತಾನುಲ್ ಹಿಂದ್ ಟ್ರಸ್ಟಿನ ಅಧ್ಯಕ್ಷರಾದ ಕೌಸರ್ ಪಾಷಾ, ನಗರಸಭೆ ಸದಸ್ಯ ಎಂ ಸಮಿವುಲ್ಲಾ, ಕರವೇ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್ ವೇದಿಕೆಯಲ್ಲಿ ಇದ್ದರು.

ವಿದ್ಯಾರ್ಥಿ ಬಜ್'ಮೆ ಫಾರೂಕ್ ಕುರ್'ಆನ್ ಪಠಿಸಿದರು.

ಈ ಸಂದರ್ಭದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು, ಸುಲ್ತಾನುಲ್ ಹಿಂದ್ ಟ್ರಸ್ಟಿನ ಅಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು, ಹಾಗೂ ಹಲವು ಕಮಿಟಿ ಅಧ್ಯಕ್ಷರು ಸದಸ್ಯರು, ಜೆಡಿಎಸ್,  ಕಾಂಗ್ರೆಸ್ ಮುಖಂಡರು ಉಪಸ್ಥಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News