×
Ad

ಸಕಲೇಶಪುರ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಮೃತ್ಯು

Update: 2023-07-29 21:27 IST

ಸಾನಿತಾ 

ಸಕಲೇಶಪುರ: ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ತಾಲೂಕಿನ ವನಗೂರು ಗ್ರಾಮದಲ್ಲಿ ನಡೆದಿದೆ.‌ ಸಾನಿತಾ (9) ಮೃತಪಟ್ಟ ಬಾಲಕಿ.

ಬಸವರಾಜು-ಬೇಬಿ ದಂಪತಿಯ ಪುತ್ರಿ ಸಾನಿತಾ ನಾಲ್ಕನೇ ತರಗತಿ ಓದುತ್ತಿದ್ದು, ಇಂದು ರಜೆಯಿದ್ದ ಕಾರಣ ಮನೆಯೊಳಗೆ ಸೀರೆ ಕಟ್ಟಿಕೊಂಡು ಜೋಕಾಲಿ ಆಡಲು ಹೋಗಿದ್ದಾಳೆ, ಈ ವೇಳೆ ಆಯತಪ್ಪಿ ಸಾನಿತಾ ಕುತ್ತಿಗಿಗೆ ಸೀರೆ ಬಿಗಿದು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News