×
Ad

ಹಾನುಬಾಳು: ಡೋನಹಳ್ಳಿ ಸೇತುವೆ ಕುಸಿತ; ಸಂಕಷ್ಟದಲ್ಲಿ ಗ್ರಾಮಸ್ಥರು

Update: 2025-06-26 13:59 IST

ಸಕಲೇಶಪುರ: ಜೂ,26: ತಾಲ್ಲೂಕಿನ ಹಾನುಬಾಳು ಹೋಬಳಿ ಡೋನಹಳ್ಳಿ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೇತುವೆ ಮೇಲೆ ನೀರು ಹರಿದಿದ್ದು, ಹಲವು ವರ್ಷಗಳ ಹಿಂದೆ ಕುಸಿದಿರುವ ಸೇತುವೆ ಸಮಸ್ಯೆ ಮತ್ತೊಮ್ಮೆ ತೀವ್ರವಾಗಿ ಗ್ರಾಮಸ್ಥರನ್ನು ಕಾಣುತ್ತಿದೆ. ಕಳೆದ 8 ವರ್ಷಗಳಿಂದ ಈ ಸೇತುವೆಯ ಪುನರ್‌ನಿಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಸಮಸ್ಯೆಯಿಂದಾಗಿ ಇಲ್ಲಿನ ಸುಮಾರು 20ರಿಂದ 30 ಕುಟುಂಬಗಳು ತೋಟ, ಗದ್ದೆ, ಮನೆ, ಪಂಚಾಯತ್ ಕಚೇರಿ, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಬ್ಯಾಂಕ್, ಆಸ್ಪತ್ರೆಗೆ ದೈನಂದಿನ ಸಂಚಾರ ನಡೆಸುವುದು ಬಹುದೊಡ್ಡ ಕಷ್ಟವಾಗಿದೆ. ಮಳೆಗಾಲದಲ್ಲಿ ಈ ಗ್ರಾಮಸ್ಥರು ನಿಜಕ್ಕೂ ನರಕಯಾತನೆ ಅನುಭವಿಸುತ್ತಿದ್ದಾರೆ.

ಈ ಹಿಂದೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಭರವಸೆ ನೀಡಲಾಗಿದ್ದರೂ, ಪ್ರಸ್ತುತ ಯಾವುದೇ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೂ ಇಲ್ಲದೇ ರೈತರು ಮತ್ತು ಗ್ರಾಮಸ್ಥರು ನಿರಾಶೆಯಲ್ಲಿದ್ದಾರೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮುಂದಾಗಬಹುದಾದ ಭಾರಿ ಅನಾಹುತವನ್ನು ತಡೆಯುವಂತೆ ಡೋನಹಳ್ಳಿ ಗ್ರಾಮಸ್ಥ ಯೋಗೇಶ್ ಮನವಿ ಮಾಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News