×
Ad

ಹಾಸನ | ಮಾದಕ ವ್ಯಸನಿಗಳಾಗುತ್ತಿರುವ ಅಪ್ರಾಪ್ತ ವಿದ್ಯಾರ್ಥಿಗಳು! ; ಆತಂಕಕಾರಿ ವಿಡಿಯೋ ವೈರಲ್

Update: 2024-09-01 15:42 IST

ಹಾಸನ : ಬೇಲೂರು ತಾಲೂಕಿನ ಬಿಕ್ಕೋಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಮಾದಕ ವ್ಯಸನಿಗಳಾಗಿರುವ ಆರೋಪ ಕೇಳಿ ಬಂದಿದ್ದು, ಅಪ್ರಾಪ್ತ ಮಕ್ಕಳು ಗಾಂಜಾ, ಬೀಡಿ, ಸಿಗರೇಟು, ಅಮುಲುಕಾರಕ ವೈಟ್ನರ್ ಸೇವಿಸುವ ಆತಂಕಕಾರಿ ವಿಡಿಯೋ ವೈರಲ್ ಆಗಿದೆ.

ಹಾಸ್ಟೆಲ್‌ಗೆ ಮಾದಕ ವಸ್ತುಗಳನ್ನು ತರುತ್ತಿರುವ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಮಾದಕ ಪದಾರ್ಥ ಸೇವಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಅಶ್ಲೀಲವಾಗಿ ಮಾತನಾಡುತ್ತಾ ಗಾಂಜಾ, ವೈಟ್ನರ್ ಸೇವಿಸುತ್ತಾ ಅಮಲಿನಲ್ಲಿ ತೇಲುತ್ತಿರುವ ಅಪ್ತಾಪ್ತರು, ತಾವೇ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಈ ಹಿಂದೆಯೂ ಈ ವಿಷಯ ಬಹಿರಂಗವಾಗಿದ್ದು, ವಿಷಯ ಗಮನಕ್ಕೆ ಬಂದಾಗ ಮಾದಕ ವಸ್ತು ವ್ಯಸನಿಯೊಬ್ಬ ಹಾಸ್ಟೆಲ್ ವಾರ್ಡನ್ ಮೇಲೇ ಹಲ್ಲೆಗೆ ಮುಂದಾಗಿದ್ದ ಘಟನೆಯೂ ನಡೆದಿತ್ತು ಎನ್ನಲಾಗಿದೆ.

ಘಟನೆ ಬಗ್ಗೆ ಸಾರ್ವಜನಿಕರು ಆತಂಕ ಹೊರಹಾಕಿದ್ದು, ತಕ್ಷಣವೇ ಮಾದಕ ವಸ್ತುಗಳ ವ್ಯಸನಿಯಾಗಿರುವ ಅಪ್ರಾಪ್ತರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಅವರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News