×
Ad

ಹಾಸನ | ಲಂಚ ಸ್ವೀಕರಿಸಿದ ಆರೋಪ; ಅರಣ್ಯ ಸಂಚಾರಿ ದಳದ ಎಸಿಎಫ್ ಲೋಕಾಯುಕ್ತ ಬಲೆಗೆ

Update: 2025-11-26 14:11 IST

ಸತೀಶ್ 

ಹಾಸನ: ಲಂಚ ಸ್ವೀಕರಿಸಿದ ಆರೋಪದಡಿ ಅರಣ್ಯ ಸಂಚಾರಿ ದಳದ ಎಸಿಎಫ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಎಸಿಎಫ್‌ ಸತೀಶ್ ಬಂಧಿತ ಆರೋಪಿ. ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಎಸಿಎಫ್ ಸತೀಶ್ ಅವರನ್ನು ತಡರಾತ್ರಿ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರಸೀಕೆರೆ ಮೂಲದ ಜ್ಯೋತಿಷಿ ಅಖಿಲೇಶ್ ಅವರಿಂದ ಮೊದಲು ₹5,000 ಬಳಿಕ ₹10,000 ಗೂಗಲ್ ಪೇ ಮೂಲಕ ಲಂಚ ಪಡೆದಿದ್ದರು ಎನ್ನಲಾಗಿದೆ.

ವೈಲ್ಡ್‌ಲೈಫ್‌ ಅಪರಾಧ ಸಂಬಂಧಿತ ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವೆ ಎಂದು ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ.

ಲೋಕಾಯುಕ್ತ ಇಲಾಖೆ ತನಿಖೆಯನ್ನು ಚುರುಕುಗೊಳಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News