×
Ad

ಹಾಸನ: ಕೊನೆಯ ಕ್ಷಣದಲ್ಲಿ ಮುರಿದು ಬಿದ್ದ ಮದುವೆ; ಹಸೆಮಣೆಯಿಂದ ಹೊರ ನಡೆದ ಮದುಮಗಳು

Update: 2025-05-23 12:15 IST

ಹಾಸನ: ಮೇ, 23: ವಧು ನಿರಾಕರಿಸಿದ್ದರಿಂದ ಇಂದು ನಿಶ್ಚಯವಾಗಿದ್ದ ಮದುವೆಯು ಕೊನೆಯ ಕ್ಷಣದಲ್ಲಿ ನಿಂತು ಹೋದ ಘಟನೆ ಹಾಸನದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಹಾಸನ ತಾಲೂಕಿನ ಬೂವನಹಳ್ಳಿಯ ಪಲ್ಲವಿ ಹಾಗೂ ಆಲೂರು ತಾಲೂಕಿನ ಈಶ್ವರಹಳ್ಳಿ ಗ್ರಾಮದ ಸರ್ಕಾರಿ ಶಿಕ್ಷಕ ವೇಣುಗೋಪಾಲ.ಜಿ ಅವರ ಮದುವೆ ನಡೆಯುತ್ತಿದ್ದ ಸಂದರ್ಭ, ಪಲ್ಲವಿಗೆ ಫೋನ್ ಕರೆ ಬಂದಿದ್ದು, ನಂತರದ ಕ್ಷಣದಲ್ಲಿ ಅವಳು ಮದುವೆ ನಿರಾಕರಿಸಿ ಕೋಣೆಗೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ‌. 

"ನಾನು ಬೇರೆ ಯುವಕನನ್ನು ಪ್ರೀತಿಸುತ್ತಿದ್ದೇನೆ, ಈ ಮದುವೆ ಬೇಡ" ಎಂದು ಸ್ಪಷ್ಟವಾಗಿ ಹೇಳಿ ಹಠ ಹಿಡಿದ್ದಾಳೆ. ಪೋಷಕರು ಮನವೊಲಿಸಲು ಪ್ರಯತ್ನಿಸಿದರೂ, ಯುವತಿ ಮದುವೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾಳೆ. 

ಸ್ಥಳಕ್ಕೆ ನಗರ ಮತ್ತು ಬಡಾವಣೆ ಠಾಣೆ ಪೊಲೀಸರು ಹಾಜರಾಗಿ ಪರಿಸ್ಥಿತಿ ಹತೋಟಿಗೆ ತಂದ ನಂತರ ವರನೂ ಕೂಡ "ಈ ಮದುವೆ ನನಗೂ ಬೇಡ" ಎಂದು ಹೇಳಿ ಹೊರಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News