ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಸನದಲ್ಲಿ ಪ್ರತಿಭಟನೆ
ಹಾಸನ : ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ಹಾಸನದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
"ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯು ಸಂವಿಧಾನಾತ್ಮಕ ಹಕ್ಕುಗಳ ವಿರುದ್ಧವಾಗಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಈ ಕಾಯ್ದೆ ಮುಸ್ಲಿಂ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಕ್ಕುಗಳ ಮೇಲೆ ಆಕ್ರಮಣವಾಗಿದೆ ” ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಧನಾ ದಾಳಿಯನ್ನು ತೀವ್ರವಾಗಿ ಖಂಡಿಸಲಾಯಿತು.
ಸಮಾವೇಶದಲ್ಲಿ ಸಾಮಾಜಿಕ ಚಿಂತಕ ರಾ.ಚಿಂತನ್, ಜನಪರ ಸಂಘಟನೆಗಳ ಮುಖಂಡ ಧರ್ಮೇಶ್, ದಲಿತ ಮುಖಂಡ ಸಂದೇಶ್, ಮರಿ ಜೊಸಫ್, ಧಾರ್ಮಿಕ ಮುಖಂಡರಾದ ಹಾಫಿಝ್ ಫರುರ್ ಅಹ್ಮದ್, ಮೌಲಾನಾ ವಸೀಮ್, ಮೌಲಾನಾ ಅಝ್ಹರ್ ಉಲ್ಲಾ ಖಸ್ವಿ, ಮುಫ್ತಿ ಝುಬೇರ್, ಮೌಲಾನಾ ನಸೀರ್ ಹುಸೇನ್ ರಜ್ವಿ, ಮೌಲಾನಾ ಅನ್ವಾರ್ ಸಅದಿ, ಅಬ್ದುಲ್ ಹಾನನ್, ಮುಫ್ತಿ ನಸೀಮುದ್ದೀನ್ ಸಾಬ್, ಮುಬಶಿರ್ ಅಹ್ಮದ್, ಮುಫ್ತಿ ಇದ್ರೀಸ್ ಅಹ್ಮದ್, ಇಮ್ರಾನ್ ಖಾದ್ರಿ ಮತ್ತು ಇತರರು ಉಪಸ್ಥಿತರಿದ್ದರು.