×
Ad

ಸಕಲೇಶಪುರ | ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಿಂದ ಪಾರದ ಕಾರ್ಮಿಕ

Update: 2024-03-04 16:52 IST

ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯ ಕೆಸಗುಲಿ ಗ್ರಾಮದ ಎಸ್ಟೇಟ್‌ನ ಅಡಿಕೆ ತೋಟವೊಂದರಲ್ಲಿ ಕೂಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ರವಿವಾರ ಸಂಜೆ ನಡೆದಿದೆ.

ತಿಮ್ಮಯ್ಯ ಎಂಬ ಕೂಲಿಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿ‌, ತಮ್ಮ ಜೊತೆಯಿದ್ದ ತಿರುಮಲ ಎಂಬ ಯುವಕನ್ನು ಸಹ ಅಪಾಯದಿಂದ ಪಾರು ಮಾಡಿದ್ದಾರೆ.

ರವಿವಾರ ಸಂಜೆ ಎಂದಿನಂತೆ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. 

ಕಾಡಾನೆ ದಾಳಿಯಿಂದ ಪಾರಾದ ಕಾರ್ಮಿಕ ತಿಮ್ಮಯ್ಯ, ಓಡಿಹೋಗಿ ಮಾಲೀಕನ ಮನೆಯ ಮುಂದೆ ನಿಂತಿದ್ದ ಕಾರಿನ ಕೆಳಗೆ ಕೆಲಕಾಲ ಅವಿತುಕೊಂಡು ಮಲಗಿದ್ದಾನೆ.

ಕರಡಿ ಎಂಬ ಹೆಸರಿನ ಆನೆ ಈ ಹಿಂದೆ ಬಿಕ್ಕೋಡಿನಲ್ಲಿ ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದು, ಐವರನ್ನು ಗಾಯಗೊಳಿಸಿತ್ತು. ಒಂಟಿಯಾಗಿ ಸಂಚರಿಸುವ ಈ ಕಾಡಾನೆ ಮನುಷ್ಯರನ್ನು ಕಂಡರೆ ದಾಳಿ ಮಾಡಲು ಮುಂದಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಕಾಡಾನೆ ಮೇಲೆ ನಿಗಾ ವಹಿಸುತ್ತಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News