ಸಕಲೇಶಪುರ | ಕಾಡೆಮ್ಮೆ ದಾಳಿಗೆ ರೈತ ಬಲಿ
Update: 2025-05-05 18:04 IST
ಸಾಂದರ್ಭಿಕ ಚಿತ್ರ
ಸಕಲೇಶಪುರ : ಕಾಡೆಮ್ಮೆ ದಾಳಿಯಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಮೃತ ರೈತನ್ನು ತಾಲೂಕಿನ ಕಲ್ಲಹಳ್ಳಿ ಗ್ರಾಮದ ತಿಮ್ಮಪ್ಪ (60) ಎಂದು ಗುರುತಿಸಲಾಗಿದೆ.
ಇಂದು (ಮೇ 5) ಬೆಳಗ್ಗೆ ಎಂದಿನಂತೆ ತಿಮ್ಮಪ್ಪ ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡೆಮ್ಮೆ ಏಕಾಏಕಿ ದಾಳಿ ಮಾಡಿದೆ ಎನ್ನಲಾಗಿದೆ. ಕಾಡೆಮ್ಮೆ ಬಲವಾಗಿ ಗುದ್ದಿದ್ದರಿಂದ ರೈತ ತಿಮ್ಮಪ್ಪ ಸ್ಥಳದಲ್ಲೇ ಮೃತಪಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.