ಸಕಲೇಶಪುರ | ವಿದ್ಯುತ್ ತಂತಿ ತಗುಲಿ ತಾಯಿ ಆನೆ, ಮರಿ ಆನೆ ಸಾವು
Update: 2025-06-15 17:10 IST
ಹಾಸನ : ವಿದ್ಯುತ್ ತಂತಿ ತಗುಲಿ ತಾಯಿ ಆನೆ ಜೊತೆ ಮರಿ ಆನೆ ಕೂಡ ಸಾವನ್ನಪಿರುವ ಘಟನೆ ಸಕಲೇಶಪುರ ವ್ಯಾಪ್ತಿಗೊಳಪಡುವ ಕೆಸಗುಲಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಗುಡ್ಡಬೆಟ್ಟ ಎಬಿಸಿ ಎಸ್ಟೇಟ್ ಬಳಿಯಿರುವ ಕೆಸಗುಲಿ ಗ್ರಾಮದ ರಂಗಶೆಟ್ಟಿ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದೆ.
ಗುಡ್ಡಬೆಟ್ಟ ಎಬಿಸಿ ಎಸ್ಟೇಟ್‌ನ ಕಾರ್ಮಿಕರಿಬ್ಬರು ಪದೇ ಪದೇ ಕರೆಂಟ್ ಕೈಕೊಡುತ್ತಿದ್ದರಿಂದ ವಿದ್ಯುತ್ ತಂತಿ ಮೇಲೆ ಏನಾದರೂ ಬಿದ್ದಿರಬಹುದೆಂದು ತಿಳಿದು ರವಿವಾರ ಬೆಳಗ್ಗೆ ತೋಟದೊಳಗೆ ತೆರಳಿದ್ದಾರೆ. ಈ ವೇಳೆ ಆನೆಗಳೆರಡೂ ಸತ್ತು ಬಿದ್ದಿರುವುದು ಕಂಡು ಬಂದಿದೆ.
ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ.