×
Ad

ಸಕಲೇಶಪುರ | ʼಮಿಸ್ಟರ್ ಹಾಸನ್ʼ ಖ್ಯಾತಿಯ ಬಾಡಿ ಬಿಲ್ಡರ್ ನಿಧನ

Update: 2025-08-05 16:54 IST

ಸೋಮಶೇಖರ್ (30) 

ಸಕಲೇಶಪುರ : ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಸೋಮಶೇಖರ್ (30) ಮೃತಪಟ್ಟ ಬಾಡಿ ಬಿಲ್ಡರ್ . ಜಿಮ್ ಸೋಮ ಎಂದೇ ಖ್ಯಾತಿಯಾಗಿದ್ದ ಸೋಮಶೇಖರ್, ಕಳೆದ ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮನನ್ನು ಕಳೆದ ರವಿವಾರ ಬೆಂಗಳೂರಿಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ʼಮಿಸ್ಟರ್ ಹಾಸನ್ ಚಾಂಪಿಯನ್ ಶಿಪ್‌ʼ ಅನ್ನು ಮೈಸೂರಿನಲ್ಲಿ ತೆಗೆದುಕೊಂಡಿದ್ದರು. ವಿವಿಧೆಡೆ ಜರುಗಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಟೈಟಲ್ ಸಹ ಜಯಿಸಿದ್ದರು. ಅಲ್ಲದೆ, ಆ.26ಕ್ಕೆ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ ತಮ್ಮದೇ ಆದ (ENERGY FITNESS GYM) ನಡೆಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News