×
Ad

ಬೇಲೂರು: ಮನೆಯ ಅಂಗಳದಲ್ಲಿ ಎರಡು ಕಾಡಾನೆಗಳ ಕಾದಾಟ

Update: 2024-04-15 23:53 IST

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದ ಯೂನುಸ್ ಎಂಬವರ ಮನೆಯ ಸಮೀಪ ಕರಡಿ ಹಾಗೂ ಕ್ಯಾಪ್ಟನ್ ಎಂಬ ಎರಡು ಕಾಡನೆಗಳ ನಡುವೇ ಸುಮಾರು ಅರ್ಧ ಘಂಟೆಗಳ ಕಾಲ ಕಾದಾಟ ನಡೆದಿದೆ.

ಸೋಮವಾರ ಮಧ್ಯಾಹ್ನ ಸುಮಾರು 1 ರ ಹೊತ್ತಿಗೆ ಕಾಣಿಸಿಕೊಂಡ ಎರಡು ಕಾಡಾನೆಗಳು ಪರಸ್ಪರ ಕಾದಾಟಕ್ಕೆ ನಿಂತಿತ್ತು. ನಂತರ ಮನೆಯ ಮಾಲೀಕರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ತಕ್ಷಣ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿಗಳು ಆಗಮಿಸಿ ಸಾಹಸ ಪಟ್ಟು ಎರಡು ಕಾಡನೆಗಳ ಕಾದಾಟಕ್ಕೆ ಕಡಿವಾಣ ಹಾಕಿ ಎರಡು ಕಾಡಾನೆಗಳನ್ನು ಬೇರ್ಪಡಿಸಿ ಹಿಮ್ಮೆಟಿಸಿದ್ದಾರೆ.

ಕಾಡಾನೆಗಳ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News