ಹಾಸನ | ಕಾಡಾನೆ ಹಿಂಡು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
Update: 2025-06-23 22:59 IST
ಹಾಸನ: ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಂಡ ಘಟನೆ ಕಿರಿಹಳ್ಳಿ ಸಮೀಪ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದಲ್ಲಿ ಕಾಡನೆಯ ಗುಂಪು ಮರಿ ಆನೆಗಳೊಂದಿಗೆ ಕಾಣಿಸಿಕೊಂಡಿದ್ದು ಇಲ್ಲಿನ ನಿವಾಸಿಗಳು ಕಾಡಾನೆಗಳನ್ನು ಕಂಡು ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನವನ್ನು ಮಾಡಿದ್ದಾರೆ .
ಕಾಡನೆಗಳು ಗಾಬರಿಯಿಂದ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹಾದು ಹೋಗುತ್ತಿದ್ದು ಕಾಡಾನೆಗಳ ಸಂಚಾರದ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.