×
Ad

ರಾತ್ರಿ 11 ಗಂಟೆ ಮೇಲೆ ಮಲಗುವುದರಿಂದ ತೂಕದ ಮೇಲೆ ಪರಿಣಾಮ!

Update: 2026-01-14 15:44 IST

ಸಾಂದರ್ಭಿಕ ಚಿತ್ರ (Image by yanalya on Freepik)

ಡಯಟ್ ಶಿಸ್ತುಬದ್ಧವಾಗಿದ್ದರೂ ನಿರ್ದಿಷ್ಟ ಹಂತದ ನಂತರ ತೂಕ ಕಡಿಮೆಯಾಗುವುದಿಲ್ಲವೆ? ಹಾಗಿದ್ದರೆ ನಿಮ್ಮ ನಿದ್ರೆಯ ಕಡೆಗೆ ಗಮನ ಕೊಡುವ ಅಗತ್ಯವಿದೆ.

ಜನರು ತೂಕ ಇಳಿಸುವ ಬಗ್ಗೆ ಚರ್ಚಿಸುವಾಗ ಸಾಮಾನ್ಯವಾಗಿ ಡಯಟ್ (ಶಿಸ್ತಿನ ಆಹಾರ), ವ್ಯಾಯಾಮ ಅಥವಾ ನಡಿಗೆಯ ಮೇಲೆ ಗಮನಹರಿಸುತ್ತಾರೆ. ಆದರೆ, ಅವರು ಸಾಮಾನ್ಯವಾಗಿ ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಮುಖ್ಯವಾಗಿ ಮಧ್ಯರಾತ್ರಿಗಿಂತ ಮೊದಲಿನ ಸಮಯ. “ಬಹುತೇಕರು ಚೆನ್ನಾಗಿ ಫಿಟ್ನೆಸ್ ಅನುಸರಿಸುತ್ತಿರಬಹುದು. ಆದರೆ ಒಂದು ತೂಕಕ್ಕಿಂತ ಕೆಳಗೆ ಇಳಿಯುವುದಿಲ್ಲ. ಅದಕ್ಕೆ ಮುಖ್ಯ ಕಾರಣ ನಿದ್ರೆ ಸರಿಯಾಗಿ ಮಾಡದೆ ಇರುವುದು” ಎನ್ನುತ್ತಾರೆ ಥಾಣೆಯ ಇಂಟರ್ನಲ್ ಮೆಡಿಸಿನ್ ನ ನಿರ್ದೇಶಕರಾದ ಡಾ ಅಮಿತ್ ಸರಫ್.

11 ಗಂಟೆಗೆ ಮಲಗುವುದು ಸರಿಯೆ?

ದೇಹ ಜೈವಿಕ ಗಡಿಯಾರವನ್ನು ಅನುಸರಿಸುತ್ತದೆ. “ಸುಮಾರು ರಾತ್ರಿ 10.30ಕ್ಕೆ ಸರಿಯಾಗಿ ಸಹಜವಾದ ಹಂತ ಆರಂಭವಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಬಹಳ ತಡವಾಗಿ ಮಲಗಿದರೆ ದೇಹದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಕಾರ್ಟಿಸಾಲ್ ನ ಮಟ್ಟ ಹೆಚ್ಚಾಗುತ್ತದೆ. ಕಾರ್ಟಿಸಾಲ್ ರಾತ್ರಿಯಿಡೀ ಹೆಚ್ಚಾಗಿದ್ದರೆ, ಆಹಾರದ ಗುಣಮಟ್ಟ ಏನೇ ಇದ್ದರೂ ಕೊಬ್ಬನ್ನು ಸಂಗ್ರಹಿಸುವುದು ಸುಲಭವಾಗುತ್ತದೆ ಮತ್ತು ಕರಗಿಸುವುದು ಕಷ್ಟವಾಗುತ್ತದೆ. ಹೀಗಾಗಿ ಉತ್ತಮ ಡಯಟ್ ನಿರ್ವಹಣೆ ಮಾಡುವವರಿಗೂ ತೂಕ ಇಳಿಸುವುದು ಕಷ್ಟವಾಗಬಹುದು” ಎನ್ನುತ್ತಾರೆ ಸರಫ್.

ಹಾರ್ಮೋನ್ಗಳ ಗೊಂದಲ

ದೇಹದ ಸಹಜವಾದ ಚಯಾಪಚಯ ಲಯ ಅತಿ ಸಮರ್ಥ ರಿಪೇರಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 3 ಗಂಟೆ ನಡುವೆ ನಡೆಯುತ್ತದೆ. ನಿದ್ರೆ ನಿಧಾನಗೊಂಡರೆ ಚಯಾಪಚಯಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಸಕ್ಕರೆ ನಿಯಂತ್ರಣದ ಮೇಲೆ ಪರಿಣಾಮವಾಗುತ್ತದೆ, ಹಸಿವೆಯ ಹಾರ್ಮೋನ್ಗಳಿಗೆ ಅಡ್ಡಿಪಡಿಸುತ್ತದೆ ಮತ್ತು ಮರುದಿನ ಹಸಿವೆ ಹೆಚ್ಚಾಗುತ್ತದೆ. ಹೀಗಾಗಿ ತಡವಾಗಿ ಮಲಗುವುದರಿಂದ ಹಸಿವೆ ಮತ್ತು ಹೊಟ್ಟೆ ತುಂಬಿರುವುದರ ನಡುವೆ ಸಮತೋಲನಕ್ಕೆ ಕಾರಣವಾಗುವ ಲೆಪ್ಟಿನ್ ಮತ್ತು ಗೆರೆಲಿನ್ ನಂತಹ ಹಾರ್ಮೋನ್ ಗಳಿಗೆ ಅಡ್ಡಿಯಾಗುತ್ತದೆ.

“ತಡವಾಗಿ ಮಲಗುವ ಸೈಕಲ್ ಒಟ್ಟು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಸಿವೆ ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್ ಬಯಕೆಗಳು ಬಲವಾಗುತ್ತವೆ ಮತ್ತು ಊಟದ ನಂತರ ಸಮಾಧಾನ ಇರುವುದಿಲ್ಲ. ಇನ್ಸುಲಿನ್ ಸೆನ್ಸಿಟಿವಿಟಿ ಇಳಿಯುತ್ತದೆ, ಮತ್ತು ಅದರಿಂದ ದೇಹ ಕೊಬ್ಬು ಸಂಗ್ರಹಿಸುವುದು ಸರಳವಾಗುತ್ತದೆ” ಎನ್ನುತ್ತಾರೆ ಸರಫ್.

ಇದಕ್ಕೆ ಪರಿಹಾರವೇನು?

ರಾತ್ರಿ 11 ಗಂಟೆಗೆ ಸಮೀಪಿಸುವಂತೆ ಮಲಗಿಬಿಡಬೇಕು. 15ರಿಂದ 20 ನಿಮಿಷ ಮೊದಲು ಮಲಗಿದರೆ ಉತ್ತಮ. ಕೆಲವು ದಿನಗಳ ಕಾಲ ಈ ನಿದ್ರೆಯ ಸೈಕಲ್ ಅನ್ನು ಅನುಸರಿಸಿ ನೋಡಿ. ರಾತ್ರಿಯ ಭೋಜನವನ್ನು ಆದಷ್ಟು ಬೇಗನೆ ಸೇವಿಸುವುದು, ಮುಖ್ಯವಾಗಿ ಮಲಗುವುದಕ್ಕಿಂತ ಮೂರು ಗಂಟೆಗಳ ಮೊದಲು ಸೇವಿಸಬೇಕು. ಇದರಿಂದ ತಡರಾತ್ರಿ ಹಸಿವು ಕಡಿಮೆಯಾಗುತ್ತದೆ. ರಾತ್ರಿ ಪದೇಪದೆ ಎಚ್ಚರವಾಗುವವರಿಗೆ ಸ್ಕ್ರೀನ್ ಸಮಯ ಕಡಿಮೆ ಮಾಡುವುದು, ಬೆಳಕು ಕಡಿಮೆ ಮಾಡುವುದು ಮತ್ತು ರಾತ್ರಿ ಭೂರಿ ಭೋಜನ ಮಾಡದೆ ಇರುವುದು ನೆರವಾಗಬಹುದು” ಎನ್ನುತ್ತಾರೆ ಸರಫ್.

ಅವರ ಪ್ರಕಾರ, ಉತ್ತಮ ಡಯಟ್ ಸೈಕಲ್ಗೆ ನಿದ್ರೆ ಅತಿ ಮುಖ್ಯ. 11 ಗಂಟೆಗೆ ಮೊದಲು ನಿದ್ರೆಗೆ ಜಾರುವುದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಸಿವೆ ಕಡಿಮೆಗೊಳಿಸುತ್ತದೆ ಮತ್ತು ತೂಕ ಕಡಿಮೆಯಾಗಲು ನೆರವಾಗುತ್ತದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News