×
Ad

ಅಮೆರಿಕದ ವಸತಿ ಪ್ರದೇಶದಲ್ಲಿ ವಿಮಾನ ಪತನ | ಮೂವರು ಮೃತ್ಯು

Update: 2024-09-01 21:52 IST

PC : AP

ವಾಷಿಂಗ್ಟನ್ : ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಸಣ್ಣ ವಿಮಾನವೊಂದು ವಸತಿ ಪ್ರದೇಶಕ್ಕೆ ಪತನಗೊಂಡು ಹಲವು ಮನೆಗಳಲ್ಲಿ ಬೆಂಕಿ ಹರಡಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೋರ್ಟ್‍ಲ್ಯಾಂಡ್ ನಗರದ ಬಳಿಯ ಫೇರ್‍ವ್ಯೂ ಎಂಬ ಪಟ್ಟಣದ ಜನವಸತಿ ಪ್ರದೇಶದಲ್ಲಿ ಅವಳಿ ಇಂಜಿನ್‍ನ ಲಘು ವಿಮಾನ ಪತನಗೊಂಡಿದ್ದು ನೆಲಕ್ಕೆ ಉರುಳುವ ಸಂದರ್ಭ ಹಲವು ವಿದ್ಯುತ್ ಕಂಬಗಳೂ ನೆಲಕ್ಕೆ ಉರುಳಿದ್ದು ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ಬಳಿಕ ಬೆಂಕಿಯ ಕೆನ್ನಾಲಗೆ ಆಗಸಕ್ಕೆ ಹಬ್ಬಿರುವ ವೀಡಿಯೊ ಸ್ಥಳೀಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದೆ. ವಿಮಾನ ಧ್ವಂಸಗೊಂಡಿದ್ದು ವಿಮಾನದಲ್ಲಿದ್ದ ಇಬ್ಬರು ಹಾಗೂ ಓರ್ವ ಸ್ಥಳೀಯ ನಿವಾಸಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಬೆಂಕಿ ಕನಿಷ್ಠ 4 ಮನೆಗಳಿಗೆ ಹಬ್ಬಿದ್ದು 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News