ರಷ್ಯಾದಲ್ಲಿ ಮತ್ತೆ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು
Update: 2025-08-05 10:32 IST
ಸಾಂದರ್ಭಿಕ ಚಿತ್ರ (PTI)
ಮಾಸ್ಕೊ: ಕಳೆದ ಕೆಲ ದಿನಗಳಿಂದ ಸರಣಿ ಭೂಕಂಪಗಳಿಂದ ತತ್ತರಿಸಿರುವ ರಷ್ಯಾದ ಕಮ್ಚಟ್ಕಾ ಕರಾವಳಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ.
ರಷ್ಯಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಸುಮಾರು 108 ಕಿಲೋಮೀಟರ್ ಆಗ್ನೇಯಕ್ಕೆ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಕಳೆದ ವಾರ ರಷ್ಯಾದ ಫಾರ್ ಈಸ್ಟರ್ನ್ ಕಮ್ಚಟ್ಕಾ ಪೆನಿನ್ಸುಲಾ ಪ್ರದೇಶದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪ ನೆರೆಯ ರಾಷ್ಟ್ರಗಳಾದ ಜಪಾನ್, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳ ಮೇಲೆ ಪ್ರಭಾವ ಬೀರಿತ್ತು. ಇದಾದ ಕೆಲವೇ ದಿನಗಳಲ್ಲಿ ರಷ್ಯಾದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ.