×
Ad

ಬಾಂಗ್ಲಾದೇಶ | ಇಸ್ಕಾನ್ ನಿಷೇಧಕ್ಕೆ ಹೈಕೋರ್ಟ್ ನಕಾರ

Update: 2024-11-28 21:04 IST

PC :  ANI 

ಢಾಕ : ಬಾಂಗ್ಲಾದೇಶದಲ್ಲಿ ಇಸ್ಕಾನ್ ನ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಗ್ಲಾದೇಶದ ಹೈಕೋರ್ಟ್ಗೆ ಗುರುವಾರ ತಳ್ಳಿಹಾಕಿದೆ.

ಇಸ್ಕಾನ್ ವಿರುದ್ಧ ಸರಕಾರ ಈಗಾಗಲೇ ಅಗತ್ಯದ ಕ್ರಮಗಳನ್ನು ಕೈಗೊಂಡಿದೆ ಎಂದು ಅಟಾರ್ನಿ ಜನರಲ್ ಹೈಕೋರ್ಟ್ಗೆ ಮಾಹಿತಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಸ್ಕಾನ್ ನಿಷೇಧ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ತಳ್ಳಿಹಾಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಡೈಲಿ ಸ್ಟಾರ್' ವರದಿ ಮಾಡಿದೆ.

ವಕೀಲ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆ ಹಾಗೂ ಇಸ್ಕಾನ್ನ ಚಟುವಟಿಕೆಗಳು, ಘರ್ಷಣೆಗೆ ಸಂಬಂಧಿಸಿ 33 ಜನರನ್ನು ಬಂಧಿಸಿರುವ ಬಗ್ಗೆ ಹೈಕೋರ್ಟ್ಗೆ ಅಟಾರ್ನಿ ಜನರಲ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News