×
Ad

ಭ್ರಷ್ಟಾಚಾರ ಪ್ರಕರಣ|ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 5 ವರ್ಷ ಜೈಲು

Update: 2025-12-01 20:55 IST

 ಶೇಖ್ ಹಸೀನಾ | Photo Credit : PTI 


ಢಾಕ, ಡಿ.1: ಭೂ ಹಗರಣಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ನ್ಯಾಯಾಲಯವು ಪದಚ್ಯುತ ಪ್ರಧಾನಿ ಶೇಖ್ ಹಸೀನಾರಿಗೆ ಐದು ವರ್ಷ ಮತ್ತು ಅವರ ಸೊಸೆ, ಬ್ರಿಟನ್‍ನ ಲೇಬರ್ ಪಕ್ಷದ ಸಂಸದೆ ಟುಲಿಪ್ ಸಿದ್ದಿಕ್‍ಗೆ ಎರಡು ವರ್ಷಗಳ ಜೈಲುಶಿಕ್ಷೆ ಘೋಷಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಢಾಕಾದ ಹೊರವಲಯದಲ್ಲಿರುವ ಸರ್ಕಾರಿ ಸ್ವಾಮ್ಯದ `ಪೂರ್ವಾಚಲ ನ್ಯೂ ಟೌನ್ ಪ್ರೊಜೆಕ್ಟ್'ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣ ಇದಾಗಿದೆ. ಆಗ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಸೈಟ್ ಹಂಚಿಕೆ ಪ್ರಕ್ರಿಯೆಯಲ್ಲಿ ತನ್ನ ಪ್ರಭಾವ ಬಳಸಿಕೊಂಡಿದ್ದರು. ಟುಲಿಪ್ ಸಿದ್ದಿಕಿ ತನ್ನ ತಾಯಿ(ಹಸೀನಾ ಅವರ ಸಹೋದರಿ) ಹೆಸರಿನಲ್ಲಿ ಸೈಟ್ ಪಡೆಯಲು ಹಸೀನಾ ಹೆಸರು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದೇ ಪ್ರಕರಣದಲ್ಲಿ ಟುಲಿಪ್ ಅವರ ತಾಯಿ ಶೇಖ್ ರೆಹಾನಾ ಅವರಿಗೂ 7 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಮೂವರೂ ನ್ಯಾಯಾಲಯದ ವಿಚಾರಣೆಗೆ ಅಥವಾ ತೀರ್ಪು ಪ್ರಕಟಿಸುವಾಗ ಹಾಜರಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News