×
Ad

ಆಸ್ಟ್ರಿಯಾ | ಕಾಲುವೆಯ ಗೋಡೆಗೆ ಅಪ್ಪಳಿಸಿದ ಹಡಗು; 17 ಮಂದಿಗೆ ಗಾಯ

Update: 2024-03-30 21:29 IST

ಸಾಂದರ್ಭಿಕ ಚಿತ್ರ

ವಿಯೆನ್ನಾ : ಬಲ್ಗೇರಿಯಾದ ವಿಹಾರ ನೌಕೆಯೊಂದು ಉತ್ತರ ಆಸ್ಟ್ರಿಯಾದ ದನೂಬೆ ನದಿಯ ಕಾಲುವೆಯ ಕಾಂಕ್ರೀಟ್ ಗೋಡೆಗೆ ಅಪ್ಪಳಿಸಿದ್ದು 17 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.

160 ಪ್ರಯಾಣಿಕರಿದ್ದ ವಿಹಾರ ನೌಕೆಯು ಜರ್ಮನಿಯ ಬವಾರಿಯಾದಿಂದ ಆಸ್ಟ್ರಿಯಾದ ಲಿಂಝ್ ನಗರಕ್ಕೆ ಪ್ರಯಾಣಿಸುತ್ತಿತ್ತು. ಉತ್ತರ ಆಸ್ಟ್ರಿಯಾದ ಅಷ್ಚಾಚ್ ಅನ್‍ಡೆರ್ ದನಾವು ನಗರದ ಬಳಿ ದನೂಬೆ ನದಿಯ ಕಾಲುವೆಯ ಕಾಂಕ್ರೀಟ್ ಗೋಡೆಗೆ ಅಪ್ಪಳಿಸಿ ದುರಂತ ಸಂಭವಿಸಿದೆ. ಗಾಯಗೊಂಡವರಲ್ಲಿ 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ನೌಕೆ ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News