×
Ad

Saudi Arabia | ಮದೀನಾದಲ್ಲಿ ಬಸ್ ದುರಂತ: ಜಿದ್ದಾದಲ್ಲಿನ ಕಾನ್ಸುಲೇಟ್ ನಲ್ಲಿ 24x7 ನಿಯಂತ್ರಣ ಕೊಠಡಿ ಪ್ರಾರಂಭ

Update: 2025-11-17 19:43 IST

ಜಿದ್ದಾ/ರಿಯಾದ್, ನ.17: ಸೌದಿ ಅರೇಬಿಯಾದ ಮದೀನಾ ಸಮೀಪ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೋಮವಾರ ಬೆಳಗ್ಗಿನ ಜಾವ ಅಪಘಾತಕ್ಕೀಡಾಗಿ 45 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಜಿದ್ದಾದಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ 24x7 ನಿಯಂತ್ರಣ ಕೊಠಡಿ ಸ್ಥಾಪಿಸಿದೆ.

ಬಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಕಾನ್ಸುಲೇಟ್ ತೀವ್ರ ಸಂತಾಪ ಸೂಚಿಸಿದೆ. ತುರ್ತು ಸಹಾಯಕ್ಕಾಗಿ ನಿಯಂತ್ರಣ ಕೊಠಡಿಯ ಫೋನ್ ನಂಬರ್ ಗಳನ್ನು ಬಿಡುಗಡೆ ಮಾಡಲಾಗಿದ್ದು, 8002440003 (ಟೋಲ್ ಫ್ರೀ), 00966122614093, 00966126614276, ಮತ್ತು 00966556122301 (WhatsApp) ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿದೆ ಎಂದು ಜಿದ್ದಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಪ್ರಕಟನೆ ತಿಳಿಸಿದೆ.

ಅಪಘಾತದ ಬಗ್ಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾದ ಕಾನ್ಸುಲೇಟ್ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸುವ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯಾತ್ರಿಕರನ್ನು ಉಮ್ರಾಗೆ ಕರೆದೊಯ್ದ ನಿರ್ವಾಹಕರೊಂದಿಗೂ ಸಮನ್ವಯ ಮುಂದುವರಿದಿದೆ.

ವಿವಿಧ ಆಸ್ಪತ್ರೆಗಳು ಮತ್ತು ಸ್ಥಳಗಳಲ್ಲಿ ಕಾನ್ಸುಲೇಟ್ ಸಿಬ್ಬಂದಿ ಹಾಗೂ ಭಾರತೀಯ ಸಮುದಾಯದ ಸ್ವಯಂಸೇವಕರ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಅಪಘಾತದಿಂದ ಸಂತ್ರಸ್ತ ಕುಟುಂಬಗಳ ಮಾಹಿತಿ ಸಂಗ್ರಹಿಸಲು ಮತ್ತು ಅಗತ್ಯ ನೆರವು ಒದಗಿಸಲು ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಅಧಿಕಾರಿಗಳು ತೆಲಂಗಾಣ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜಿದ್ದಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News