×
Ad

ಗಾಝಾ ಶಾಂತಿ ಯೋಜನೆ ನಿರ್ಣಯ; ಭದ್ರತಾ ಮಂಡಳಿಯಿಂದ ನ.17ಕ್ಕೆ ಮತದಾನ

Update: 2025-11-16 22:08 IST

            ವಿಶ್ವಸಂಸ್ಥೆಯ ಭದ್ರತಾ ಮಂಡಳಿ| Photo Credit: AP

ನ್ಯೂಯಾರ್ಕ್, ನ.16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಶಾಂತಿ ಯೋಜನೆಯನ್ನು ಬೆಂಬಲಿಸುವ ನಿರ್ಣಯದ ಕುರಿತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಮತದಾನ ಮಾಡಲಿದೆ.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಎರಡು ವರ್ಷಗಳ ನಡುವಿನ ಸಂಘರ್ಷದಲ್ಲಿ ಕದನವಿರಾಮವನ್ನು ಜಾರಿಗೊಳಿಸುವ ಕುರಿತ ಕರಡು ನಿರ್ಣಯವನ್ನು, ಕಳೆದ ಗುರುವಾರ 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿತ್ತು.

ಈ ಕರಡು ನಿರ್ಣಯವು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಹಂಗಾಮಿ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ (ಐಎಸ್ಎಫ್)ಯನ್ನು ರಚಿಸಲಿದೆ. ಗಾಝಾಪಟ್ಟಿಯ ಗಡಿಪ್ರದೇಶಗಳ ಭದ್ರತೆಗೆ ಹಾಗೂ ಗಾಝಾಪಟ್ಟಿಯನ್ನು ಮಿಲಿಟರಿ ರಹಿತಗೊಳಿಸಲು ಇಸ್ರೇಲ್ ಹಾಗೂ ಈಜಿಪ್ಟ್ ಮತ್ತು ಹೊಸತಾಗಿ ತರಬೇತಿ ಪಡೆದ ಫೆಲೆಸ್ತೀನ್ ಪೊಲೀಸರಿಗೆ ಐಎಸ್ಎಫ್ ನೆರವಾಗಲಿದೆ.

ಅಲ್ಲದೆ, ಭವಿಷ್ಯದಲ್ಲಿ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಸಾಧ್ಯತೆಯ ಬಗ್ಗೆಯೂ ಈ ಕರಡಿನಲ್ಲಿ ಪ್ರಸ್ತಾವಿಸಲಾಗಿದೆ. ಅಮೆರಿಕ ಹಾಗೂ ಈಜಿಪ್ಟ್, ಸೌದಿ ಆರೇಬಿಯ, ಟರ್ಕಿ ಸೇರಿದಂತೆ ಹಲವು ಅರಬ್ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಈ ನಿರ್ಣಯವನ್ನು ತ್ವರಿತವಾಗಿ ಆಂಗೀಕರಿಸುವಂತೆ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News