×
Ad

ಕದನ ವಿರಾಮ ಒಪ್ಪಂದ : ಇಸ್ರೇಲ್‌ನ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಗಾಝಾದಲ್ಲಿ ಯುದ್ಧ ಕೊನೆಗೊಂಡಿದೆ ಎಂದು ಘೋಷಿಸಿದ ಡೊನಾಲ್ಡ್ ಟ್ರಂಪ್

Update: 2025-10-13 15:37 IST

Photo credit: PTI

ಗಾಝಾ : ಗಾಝಾ ಕದನ ವಿರಾಮ ಒಪ್ಪಂದದ ಭಾಗವಾಗಿ ಸೋಮವಾರ ಬೆಳಿಗ್ಗೆ ಹಮಾಸ್‌ ಎಲ್ಲಾ 20 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಹಮಾಸ್ ಒತ್ತೆಯಾಳುಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಏಳು ಒತ್ತೆಯಾಳುಗಳನ್ನು ಬೆಳಿಗ್ಗೆ ಬಿಡುಗಡೆ ಮಾಡಲಾಯಿತು. ಎರಡನೇ ಹಂತದಲ್ಲಿ ಮತ್ತೆ 13 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಯುದ್ಧವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯೊಂದಿಗೆ ಗಾಝಾದಲ್ಲಿ ಯುದ್ಧ ಮುಕ್ತಾಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಎರಡು ವರ್ಷಗಳ ಭಯಾನಕ ಯುದ್ಧದ ಬಳಿಕ 20 ಇಸ್ರೇಲ್‌ ಒತ್ತೆಯಾಳುಗಳು ತಮ್ಮ ಮನೆಗೆ ಮರಳುತ್ತಿದ್ದಾರೆ. ಯುದ್ಧ ಒಪ್ಪಂದದ ಭಾಗವಾಗಿ ಇಸ್ರೇಲ್‌ ಜೈಲಿನಿಂದ ಸುಮಾರು 2,000 ಕೈದಿಗಳು ಬಿಡುಗಡೆಯಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News