ಹಾಲಿವುಡ್ ನಿರ್ದೇಶಕ ರೀನರ್, ಪತ್ನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2025-12-15 23:36 IST
photo: bbc
ನ್ಯೂಯಾರ್ಕ್, ಡಿ.15: ಖ್ಯಾತ ಹಾಲಿವುಡ್ ನಿರ್ದೇಶಕ ರಾಬ್ ರೀನರ್ ಮತ್ತು ಅವರ ಪತ್ನಿ ಮಿಶೆಲ್ ರೀನರ್ ಅವರ ಮೃತದೇಹ ಕತ್ತುಸೀಳಿದ ಸ್ಥಿತಿಯಲ್ಲಿ ಲಾಸ್‍ಏಂಜಲೀಸ್ ನ ಮನೆಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
`ವೆನ್ ಹ್ಯಾರಿ ಮೆಟ್ ಸ್ಯಾಲಿ; ಮಿಸರಿ, ಸ್ಟ್ಯಾಂಡ್ ಬೈ ಮಿ' ಮುಂತಾದ ಹಿಟ್ ಸಿನೆಮಾಗಳನ್ನು ನಿರ್ದೇಶಿಸಿದ್ದ 78 ವರ್ಷದ ರೀನರ್ ಹಾಗೂ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ಮಾಹಿತಿಯಿದೆ. ದಂಪತಿಯ ಪುತ್ರ ನಿಕ್ ಶಂಕಿತ ಆರೋಪಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.