ಇರಾನ್ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿದೆ: IRGC
"ಇದುವರೆಗೆ ಈ ಸಂಘರ್ಷದಲ್ಲಿ ಬಳಸದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಗೂ ಸಿದ್ಧ"
Update: 2026-03-06 11:33 IST
Photo Credit : PTI
ಟೆಹ್ರಾನ್: ಇರಾನ್ ದೀರ್ಘಕಾಲದ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಇದುವರೆಗೆ ಈ ಸಂಘರ್ಷದಲ್ಲಿ ಬಳಸದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಗೂ ಸಿದ್ಧವಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಬ್ರಿಗೇಡಿಯರ್ ಜನರಲ್ ಅಲಿ ಮುಹಮ್ಮದ್ ನೈನಿ ಪ್ರಕಟಣೆ ಹೊರಡಿಸಿದ್ದು, ಇರಾನ್‌ನ ಶತ್ರುಗಳು ಮುಂದಿನ ಹೊಸ ಅಲೆಯ ದಾಳಿಯಲ್ಲಿ “ತೀವ್ರವಾದ ಹೊಡೆತಗಳನ್ನು” ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಹೊಸ ತಂತ್ರಗಳು ಮತ್ತು ಶಸ್ತ್ರಾಸ್ತ್ರಗಳು ಬಳಕೆಗೆ ಸಿದ್ಧವಾಗಿವೆ. ಈ ತಂತ್ರಜ್ಞಾನಗಳನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬಳಸಲಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಅಮೆರಿಕ ಮತ್ತು ಇಸ್ರೇಲ್ ನಡೆಸಿದ 12 ದಿನಗಳ ಯುದ್ಧಕ್ಕಿಂತ ಈಗ ಇರಾನ್ ಹೆಚ್ಚು ಸಿದ್ಧವಾಗಿದೆ ಎಂದು ಮೊಹಮ್ಮದ್ ನೈನಿ ಹೇಳಿದ್ದಾರೆ.