ಇರಾನ್ ಶರಣಾಗುವ ಪ್ರಶ್ನೆಯೇ ಇಲ್ಲ: ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ
Update: 2025-06-18 16:46 IST
ಇರಾನ್ ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ (Photo credit: AP/PTI)
ಟೆಹರಾನ್: ಶರಣಾಗುವ ಯಾವುದೇ ಪ್ರಶ್ನೆ ಇರಾನ್ ಮುಂದೆ ಇಲ್ಲ ಎಂದು ಇರಾನ್ ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಹೇಳಿದ್ದಾರೆ.
ಶಾಂತಿಯ ಜೊತೆ ಇರಾನ್ ದೃಢವಾಗಿ ನಿಲ್ಲುವಂತೆ ಯುದ್ಧದ ಜೊತೆಯು ದೃಢವಾಗಿ ನಿಲ್ಲಲಿದೆ. ನಮ್ಮ ರಾಷ್ಟ್ರ ಯಾರಿಗೂ ಶರಣಾಗುವುದಿಲ್ಲ ಎಂದು ಅವರು ದೂರದರ್ಶನದ ಸಂದೇಶದಲ್ಲಿ ಹೇಳಿದ್ದಾರೆ ಎಂದು ʼತಸ್ನಿಮ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಮತ್ತು ಅದರ ಇತಿಹಾಸವನ್ನು ತಿಳಿದಿರುವವರು ಇರಾನಿಯನ್ನರು ಬೆದರಿಕೆಯ ಭಾಷೆಗೆ ಸರಿಯಾಗಿ ಎಂದಿಗೂ ಉತ್ತರಿಸುವುದಿಲ್ಲ ಎಂದು ತಿಳಿದಿದ್ದಾರೆ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗೆ ಇರಾನ್ ನಾಯಕ ತಿರುಗೇಟು ನೀಡಿದ್ದಾರೆ.
ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ತಿಳಿಯಬೇಕು ಎಂದು ಅವರು ಹೇಳಿದ್ದಾರೆ.