ಕದನ ವಿರಾಮ ಉಲ್ಲಂಘನೆ | ಗಾಝಾಗೆ ನೆರವು ಸಾಗಾಟ ನಿರ್ಬಂಧಿಸಿದ ಇಸ್ರೇಲ್ : ವರದಿ
Update: 2025-10-20 16:21 IST
Photo credit: PTI
ಗಾಝಾ : ಹಮಾಸ್ ಕದನ ವಿರಾಮ ಉಲ್ಲಂಘನೆ ಮಾಡಿದ ಕಾರಣ ಮುಂದಿನ ಸೂಚನೆ ಬರುವವರೆಗೂ ಗಾಝಾಗೆ ನೆರವು ಸಾಗಾಟವನ್ನು ನಿರ್ಬಂಧಿಸಲಾಗಿದೆ ಎಂದು ಇಸ್ರೇಲ್‌ನ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣ ಗಾಝಾದಲ್ಲಿ ಇಸ್ರೇಲ್ ಪಡೆಗಳ ಮೇಲೆ ರವಿವಾರ ಹಮಾಸ್ ದಾಳಿ ನಡೆಸಿದೆ. ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆಯು ತಿಳಿಸಿದೆ.
ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸಿರುವುದಾಗಿ ಹಮಾಸ್ ಕೂಡ ಆರೋಪಿಸಿದೆ. ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆಯು ತಿಳಿಸಿದೆ.
ಕದನ ವಿರಾಮ ಮಾತುಕತೆಗಳಲ್ಲಿ ಭಾಗಿಯಾಗಿರುವ ಹಿರಿಯ ಈಜಿಪ್ಟ್ ಅಧಿಕಾರಿಯೊಬ್ಬರು ಪರಿಸ್ಥಿತಿಯನ್ನು ಶಮನಗೊಳಿಸಲು ಶ್ರಮ ನಡೆಯುತ್ತಿವೆ ಎಂದು ಹೇಳಿದ್ದಾರೆ.