×
Ad

ಗಾಝಾ ಮೇಲಿನ ಆಕ್ರಮಣಕಾರಿ ಕಾರ್ಯಾಚರಣೆ ನಿಲ್ಲಿಸಿದ ಇಸ್ರೇಲ್ : ವರದಿ

Update: 2025-10-09 22:10 IST

Photo Credit : aljazeera.com

ಟೆಲ್‍ಅವೀವ್, ಅ.9: ಕದನ ವಿರಾಮದ ಪ್ರಥಮ ಹಂತದ ಭಾಗವಾಗಿ ಗಾಝಾದಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಇಸ್ರೇಲ್ ನಿಲ್ಲಿಸಿರುವುದಾಗಿ ವರದಿಯಾಗಿದೆ.

ʼಗಾಝಾದಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಾವು ನಿಲ್ಲಿಸಿದ್ದೇವೆ' ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಅಲ್ ಅರೇಬಿಯಾ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.

ಈ ಮಧ್ಯೆ, ಗಾಝಾ ಶಾಂತಿ ಯೋಜನೆಯ ಪ್ರಥಮ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಗೆ ಸೂಚಿಸಿದ ನಂತರವೂ ಗುರುವಾರ ಬೆಳಿಗ್ಗೆ ಗಾಝಾದಲ್ಲಿ ವೈಮಾನಿಕ ದಾಳಿ ನಡೆದಿರುವುದಾಗಿ ಗಾಝಾ ರಕ್ಷಣಾ ಏಜೆನ್ಸಿ ಗುರುವಾರ ವರದಿ ಮಾಡಿದೆ.

ಗಾಝಾದಲ್ಲಿ ಪ್ರಸ್ತಾವಿತ ಕದನ ವಿರಾಮ ಚೌಕಟ್ಟಿನ ಕುರಿತ ಒಪ್ಪಂದದ ಬಗ್ಗೆ ಬುಧವಾರ ರಾತ್ರಿಯ ಪ್ರಕಟಣೆಯ ನಂತರ ಹಲವು ಸ್ಫೋಟಗಳು, ವಿಶೇಷವಾಗಿ ಉತ್ತರ ಗಾಝಾದಲ್ಲಿ ವರದಿಯಾಗಿದೆ. ಗಾಝಾ ನಗರದ ಮೇಲೆಯೂ ಸರಣಿ ವೈಮಾನಿಕ ದಾಳಿ ನಡೆದಿರುವ ಮಾಹಿತಿಯಿದೆ' ಎಂದು ಏಜೆನ್ಸಿಯ ವಕ್ತಾರರನ್ನು ಉಲ್ಲೇಖಿಸಿ `ಎಎಫ್‍ಪಿ' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News