×
Ad

ಕದನ ವಿರಾಮ ಘೋಷಣೆ ಬಳಿಕವೂ ಇಸ್ರೇಲ್‌ನಿಂದ ಗಾಝಾ ಮೇಲೆ ವಾಯುದಾಳಿ!

Update: 2025-10-09 10:05 IST

ಸಾಂದರ್ಭಿಕ ಚಿತ್ರ : PTI

ಗಾಝಾ, ಅ. 9: ಮಧ್ಯಪ್ರಾಚ್ಯದಲ್ಲಿ ಶಾಂತಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆಯೇ, ಇಸ್ರೇಲ್ ಮತ್ತು ಹಮಾಸ್ ನಡುವೆ ಘೋಷಿತವಾದ ಕದನ ವಿರಾಮ ಒಪ್ಪಂದದ ಬಳಿಕವೂ ಗಾಝಾದ ಮೇಲೆ ಇಸ್ರೇಲ್ ಗುರುವಾರ ವಾಯುದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ ಕೆಲವೇ ನಿಮಿಷಗಳ ನಂತರ, ಗಾಝಾದ ಬೀದಿಗಳಲ್ಲಿ ಜನರು ಸಂಭ್ರಮಿಸುತ್ತಿದ್ದ ವೇಳೆ ಇಸ್ರೇಲ್ ನ ಯುದ್ಧವಿಮಾನಗಳು ನಗರ ಭಾಗಗಳ ಮೇಲೆ ಬಾಂಬ್ ದಾಳಿ ನಡೆಸಿದವು.

ದಾಳಿಯಿಂದ ಉಂಟಾದ ಹಾನಿ ಅಥವಾ ಸಾವಿನ ಪ್ರಮಾಣದ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಸ್ಥಳೀಯ ಮೂಲಗಳ ಪ್ರಕಾರ, ಬಾಂಬ್ ಸ್ಫೋಟದ ಪರಿಣಾಮವಾಗಿ ಗಾಝಾ ನಗರದ ಕೆಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳು ಆತಂಕದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News