×
Ad

ಗಾಝಾದಲ್ಲಿ ಇಸ್ರೇಲ್‌ನ ವಾಯುದಾಳಿಗೆ ಒಂದೇ ಕುಟುಂಬದ 11 ಮಂದಿ ಮೃತ್ಯು

Update: 2024-09-14 22:22 IST

ಸಾಂದರ್ಭಿಕ ಚಿತ್ರ (PTI)

ಗಾಝಾ ನಗರ : ಗಾಝಾ ನಗರದಲ್ಲಿ ಶನಿವಾರ ಮುಂಜಾನೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮನೆಯೊಂದು ಸಂಪೂರ್ಣ ನಾಶವಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 11 ಮಂದಿ ಸದಸ್ಯರು ಸಾವನ್ನಪ್ಪಿದ್ದಾರೆಂದು ಸ್ಥಳೀಯ ನಾಗರಿಕ ರಕ್ಷಣಾ ಏಜೆನ್ಸಿ ತಿಳಿಸಿದೆ.

‘‘ ಪೂರ್ವ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮನೆಯೊಂದು ಧ್ವಂಸಗೊಂಡಿದ್ದು, ಅದರಲ್ಲಿದ್ದ ನಾಲ್ವರು ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರದಂತೆ 11 ಮಂದಿ ಹುತಾತ್ಮರ ಮೃತದೇಹಗಳು ಪತ್ತೆಯಾಗಿವೆ’’ ಎಂದು ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹಮೂದ್ ಬಸ್ಸಾಲ್ ತಿಳಿಸಿದ್ದಾರೆ.

ಗಾಝಾ ನಗರದ ಅಲ್‌ತುಫಾದಲ್ಲಿರುವ ಶುಜೈಯಾ ಶಾಲೆಯ ಸಮೀಪ ಈ ದಾಳಿ ನಡೆದಿದೆ. ಘಟನೆಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ರಕ್ಷಣಾ ಕಾರ್ಯಕರ್ತರು ಮುಂದುವರಿಸಿದ್ದಾರೆ ಎಂದು ಬಸ್ಸಾಲ್ ಅವರು ತಿಳಿಸಿದ್ದಾರೆ. ಆದರೆ ಈ ದಾಳಿಯ ಬಗ್ಗೆ ಇಸ್ರೇಲ್ ಸೇನೆ ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿಯಿಂದ ಇಸ್ರೇಲ್ ಪಡೆಗಳು ಗಾಝಾದ ಇತರ ಭಾಗಗಳಲ್ಲಿಯೂ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿಯನ್ನು ಹತ್ಯೆಗೈದಿವೆ ಎಂದು ಬಸ್ಸಾಲ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News