×
Ad

ನಿರಾಶ್ರಿತ ಶಿಬಿರಿದ ಮೇಲೆ ಇಸ್ರೇಲ್ ವಾಯುದಾಳಿ ; ಕನಿಷ್ಠ ಏಳು ಮಂದಿ ಮೃತ್ಯು

Update: 2024-12-10 22:29 IST

ಸಾಂದರ್ಭಿಕ ಚಿತ್ರ | PC :PTI

ಗಾಝಾ : ಕೇಂದ್ರ ಗಾಝಾದ ನುಸೈರತ್ ನಿರಾಶ್ರಿತ ಶಿಬಿರದಲ್ಲಿರುವ ಮನೆಯೊಂದರ ಮೇಲೆ ಮಂಗಳವಾರ ಬೆಳಗ್ಗೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ .

ಈ ಮನೆಯನ್ನು ಗುರಿಯಿರಿಸಿ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂದು ಫೆಸ್ತೀನಿಯನ್ ಸಿವಿಲ್ ಡಿಫೆನ್ಸ್ ಎಂಬ ನಾಸಂಸ್ಥೆ ಹೇಳಿಕೆ ನೀಡಿದೆ. ತನ್ನ ತಂಡಗಳು ದಾಳಿಗೆ ತುತ್ತಾದ ಮನೆಗಳ ಅವಶೇಷಗಳಿಂದ ಏಳು ಮೃತದೇಹಗಳನ್ನು ಹೊರತೆಗೆದಿದ್ದು, ಹಲವಾರು ಗಾಯಾಳುಗಳನ್ನು ರಕ್ಶಿಸಿರುವುದಾಗಿ ಹೇಳಿದೆ. ಮೃತರಲ್ಲಿ ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಒಳಗೊಂಡಿದ್ದಾರೆ.

ದಾಳಿಯಲ್ಲಿ ಸಾವನ್ನಪ್ಪಿದ್ದವರಲ್ಲಿ ಫೆಲೆಸ್ತೀನ್ ಫುಟ್ಬಾಲ್ ಆಟಗಾರ ಮೊಹಮ್ಮದ್ ಖಲೀಫಾ ಕೂಡಾ ಸೇರಿದ್ದಾರೆಂದು ಕುಡ್ಸ್ ನ್ಯೂಸ್ ನೆಟ್‌ವರ್ಕ್ ವರದಿ ಮಾಡಿದೆ.

ಸೋಮವಾರ ರಾತ್ರಿ ಉತ್ತರ ಗಾಝಾ ನಗರದ ಶೇಖ್ ರದ್ವಾನ್ ವಸತಿ ಪ್ರದೇಶ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ಬಾಂಬಂ ದಾಳಿಯಲ್ಲಿ ಓರ್ವ ಫೆಲೆಸ್ತೀನ್ ನಾಗರಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News