ಗಾಝಾದಲ್ಲಿ ಇಸ್ರೇಲ್‍ನ ನಾಲ್ವರು ಸೈನಿಕರು ಮೃತ್ಯು: ವರದಿ
Update: 2025-09-19 21:36 IST
ಸಾಂದರ್ಭಿಕ ಚಿತ್ರ | PC ; aljazeera.com
ಜೆರುಸಲೇಂ, ಸೆ.19: ದಕ್ಷಿಣ ಗಾಝಾ ಪಟ್ಟಿಯಲ್ಲಿ ಇಸ್ರೇಲ್‍ನ ನಾಲ್ಕು ಯೋಧರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಶುಕ್ರವಾರ ಹೇಳಿದೆ.
ದಕ್ಷಿಣ ಗಾಝಾದ ರಫಾ ನಗರದಲ್ಲಿ 4 ಯೋಧರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್‍ನ ಮಾಧ್ಯಮಗಳು ವರದಿ ಮಾಡಿದ್ದು ಸಾವು-ನೋವಿಗೆ ಕಾರಣ ನೀಡಿಲ್ಲ. ಇದು ಆಗಸ್ಟ್‌ನಲ್ಲಿ ಗಾಝಾ ನಗರದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಬಳಿಕ ಇಸ್ರೇಲ್ ಸೇನೆಗೆ ಎದುರಾದ ಪ್ರಮುಖ ಹಿನ್ನಡೆಯಾಗಿದೆ. 2023ರ ಅಂತ್ಯದಲ್ಲಿ ಗಾಝಾದಲ್ಲಿ ಇಸ್ರೇಲಿ ಮಿಲಿಟರಿ ಆರಂಭಿಸಿದ ಭೂ ದಾಳಿಯ ಬಳಿಕ 472 ಸೈನಿಕರು ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.